More

    ಬಿಲ್​ ಕೇಳಿದ್ದಕ್ಕೆ ಜೆಸ್ಕಾಂ ಅಧಿಕಾರಿ ಮೇಲೆ ಹಲ್ಲೆ

    ಕಲಬುರಗಿ: ಬಾಕಿ ಉಳಿದಿರುವ ವಿದ್ಯುತ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಆಳಂದನಲ್ಲಿ ಬುಧವಾರ ಜರುಗಿದೆ. ಆಳಂದನ ಸೋನಾರ ಗಲ್ಲಿಯ ವಸೀಂ ಸೈಫನ್ ಸಾಬ್ ಹಲ್ಲೆ ಮಾಡಿದ ವ್ಯಕ್ತಿ.

    ಎಇ ಸಿದ್ರಾಮಪ್ಪ ನಿಂಬಾಳಕರ್ ಅವರು ತೀವ್ರ ಗಾಯಗೊಂಡಿದ್ದು, ಆಳಂದನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಯಲ್ಲಿದ್ದ ಲೈನ್ಮನ್ ಇಜಾಜ್ ಬಾಬು ಬೌಡಿವಾಲೆ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

    ಘಟನೆ ಹಿನ್ನಲೆ: ಆಳಂದನ ಸೋನಾರ ಗಲ್ಲಿಯ ನಿವಾಸಿ ವಸೀಂ ಸೈಫನ್ ಸಾಬ್ ಎಂಬುವವರು ಮನೆಯದ್ದು 3000 ಹಾಗೂ ದಾಬಾದ 7000 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಈಗಲೇ ಬಿಲ್ ಕ್ಲಿಯರ್ ಮಾಡಿ ಎಂದಿದ್ದಾರೆ. ಬಿಲ್ ಕಟ್ಟದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದು, ಈ ವೇಳೆ ವಸೀಂ ಹಾಗೂ ಜೆಸ್ಕಾಂ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಎಇ ಸಿದ್ರಾಮಪ್ಪ ಅವರ ಮೇಲೆ ಕೈ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಲೈನ್​ಮನ್​ಗೂ ಒಂದೆರಡು ಪೆಟ್ಟು ಬಿದ್ದಿವೆ.

    ಜೆಸ್ಕಾಂ ಆಳಂದ ವಿಭಾಗದ ಎಇಇ ನಟರಾಜ ಪೂಜಾರಿ, ಪಿಐ ಮಹಾದೇವ ಪಂಚಮುಖಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts