More

    ಬಿಜೆಪಿಗೆ ಸೆಡ್ಡು ಹೊಡೆದ ಜೆಡಿಎಸ್ ಮೆರವಣಿಗೆ:  ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಭಾಗಿ

    ಹಾಸನ : ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಗುರುವಾರ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸೆಡ್ಡು ಹೊಡೆದು ಬೃಹತ್ ರ‌್ಯಾಲಿ ನಡೆಸುವ ಮೂಲಕ ದಳಪತಿಗಳು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
    ಗುರುವಾರ ಬೆಳಗ್ಗೆ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ರ‌್ಯಾಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ನಂತರ ಸಾಲಗಾಮೆ ರಸ್ತೆಯ ಮೂಲಕ ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ ಸಾಗಿ ಹೇಮಾವತಿ ಪ್ರತಿಮೆ ಬಳಿ ಆಗಮಿಸಿ ಅಲ್ಲಿಂದ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಆಗಮಿಸಿತು.
    ಮೆರವಣಿಗೆ ರಕ್ಷಣಾ ಪುರಂಗೆ ಆಗಮಿಸುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ರ‌್ಯಾಲಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತು.
    ಎನ್.ಆರ್.ವೃತ್ತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಅಭ್ಯರ್ಥಿ ಸ್ವರೂಪ್ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ, ಹೂ ಮಳೆ ಸುರಿಸಲಾಯಿತು. ಮೆರವಣಿಗೆಯ ಎಲ್ಲೆಡೆ ಜೆಡಿಎಸ್ ಬಾವುಟ ರಾರಾಜಿಸುತ್ತಿದ್ದವು.
    ಬಳಿಕ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೇನೆ ಎಂಬುದು ಜನರಿಗೇ ಗೊತ್ತು. ಅನಾರೋಗ್ಯದ ಸಂದರ್ಭದಲ್ಲಿಯೂ ಕೂಡ ನಿಮ್ಮ ಮುಂದೆ ಬಂದು ಸ್ವರೂಪ್ ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದರು.
    ಪ್ರೀತಂ ಗೌಡನನ್ನು ಸೋಲಿಸಬೇಕು. ಅದಕ್ಕೆ ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ. ಚುನಾವಣೆ ಸಂದರ್ಭದಲ್ಲಿ ಮತ್ತೆ ಬಂದು ಪ್ರಚಾರ ಮಾಡುತ್ತೇನೆ. ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು. ಅದಕ್ಕಾಗಿ ಸಹೋದರರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು.
    ಸ್ವರೂಪ್ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದವರು. ಯಾರ ಮೇಲೆಯೂ ಆರೋಪ ಮಾಡಿದವರಲ್ಲ. ಆದರೆ ಈಗಿನ ಶಾಸಕರು ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತಿದೆ. ಆತನನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದರು.
    ಮೆರವಣಿಗೆಯಲ್ಲಿ ಮಾಜಿ ಸಚಿವ ಎ.ಮಂಜು, ದಿ. ಎಚ್‌ಎಸ್.ಪ್ರಕಾಶ್ ಅವರ ಪತ್ನಿ ಲಲಿತಮ್ಮಾ, ಜೆಡಿಎಸ್ ಮುಖಂಡರಾದ ಕೆ.ಎಂ.ರಾಜೇಗೌಡ, ಎಸ್.ದ್ಯಾವೇಗೌಡ, ಸುಮುಖ ರಘು, ಸೋಮನಹಳ್ಳಿ ನಾಗರಾಜ್, ನಗರಸಭೆ ಜೆಡಿಎಸ್ ಸದಸ್ಯರು, ತಾಪಂ, ಜಿಪಂ ಮಾಜಿ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.

    ದೇವೇಗೌಡರ ಆಗಮನ, ಮಳೆಯ ಸಿಂಚನ
    ಜೆಡಿಎಸ್‌ನ ರ‌್ಯಾಲಿಗೆ ಗುರುವಾರ ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಹಾಸನಕ್ಕೆ ಆಗಮಿಸುತ್ತಿದ್ದಂತೆ ಮಳೆಯ ಸಿಂಚನವಾಯಿತು. ಇಷ್ಟು ದಿನ ಬಿಸಿಲಿನ ಝಳದಿಂದ ಪರಿತಪಿಸುತ್ತಿದ್ದ ಜನರಿಗೆ ಮಳೆ ಬಂದಿದ್ದು ಖುಷಿ ನೀಡಿದರೆ ಜೆಡಿಎಸ್‌ಗೆ ಶುಭ ಸೂಚನೆಯಂತೆ ಕಂಡಿತು. ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಹಾಸನದಲ್ಲೂ ಭರ್ಜರಿ ಜಯಭೇರಿ ಬಾರಿಸಲಿದೆ. ದೇವರು ಆಶೀರ್ವದಿಸಿದಂತೆ ಮಳೆಯ ಸಿಂಚನವಾಗಿದೆ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದರು.

    ಉತ್ಸಾಹದಿಂದ ಪಾಲ್ಗೊಂಡ ಭವಾನಿ
    ಜಿಲ್ಲಾ ಕ್ರೀಡಾಂಗಣದಿಂದ ಎನ್.ಆರ್.ವೃತ್ತದವರೆಗೂ ನಡೆದ ಬೃಹತ್ ರ‌್ಯಾಲಿಯಲ್ಲಿ ಭವಾನಿ ರೇವಣ್ಣ ಅವರು ಬಹಳ ಉತ್ಸಾಹದಿಂದ ಪಾಲ್ಗೊಂಡು ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ನಗುಮುಖದೊಂದಿಗೆ ಕೈ ಮುಗಿಯುತ್ತಾ ಮೆರವಣಿಗೆಯಲ್ಲಿ ಸಾಗಿದರು. ಇವರಿಗೆ ರೇವಣ್ಣ, ಪ್ರಜ್ವಲ್, ಸೂರಜ್, ಸ್ವರೂಪ್ ಅವರು ಸಾಥ್ ನೀಡಿದರು.

    ದೇವೇಗೌಡರ ಕುಟುಂಬ ಅಂದರೆ ಹುಡುಗಾಟನಾ: ಎಚ್‌ಡಿಕೆ
    ಕುಟುಂಬ ರಾಜಕಾರಣ ಎಂದು ಪದೇ ಪದೇ ಆರೋಪ ಮಾಡುವವರಿಗೆ ದೇವೇಗೌಡರ ಕುಟುಂಬ ಅಂದರೆ ಹುಡುಗಾಟನಾ. ನಮ್ಮ ಕುಟುಂಬದವರು ರಾಜಕಾರಣ ಮಾಡಬೇಕಲ್ಲವೇ ಎಂದು ಶಾಸಕ ಪ್ರೀತಂಗೌಡರಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
    ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬವೆಂದರೆ ಹುಡುಗಾಟವಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನಮ್ಮ ಕುಟುಂಬದವರೆಲ್ಲರೂ ಒಟ್ಟಾಗಿದ್ದೇವೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಕಾರ್ಯಕರ್ತರೇ ತಕ್ಕ ಉತ್ತರ ನೀಡಿದ್ದಾರೆ ಎಂದರು.
    ಆಕಸ್ಮಿಕವಾಗಿ ಗೆದ್ದು ನಮ್ಮ ಕುಟುಂಬದ ಮೇಲೆಯೇ ಸವಾಲು ಹಾಕುತ್ತಾರೆ. ಇಂದು ಜನರು ಪ್ರೀತಿ-ವಿಶ್ವಾಸದಿಂದ ಶಕ್ತಿ ತುಂಬಿದ್ದಾರೆ. ಕಳೆದ ಬಾರಿಯೇ ಕೆಲ ತಪ್ಪುಗಳಿಂದ ಅವರು ಗೆದ್ದಿದ್ದರು. ಆದರೆ ಈ ಬಾರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ‌್ಯಕರ್ತನನ್ನು ನಿಲ್ಲಿಸಿದರೂ ಜನರೇ ಗೆಲ್ಲಿಸುತ್ತಾರೆ ಎಂದರು.
    ಪ್ರೀತಂ ಗೌಡ ಹೊಳೆನರಸೀಪುರದಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಎಲ್ಲಿ ಬೇಕಾದರೂ ನಿಲ್ಲಲಿ. ಇವತ್ತು ನಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ. ಚುನಾವಣೆಯಲ್ಲೂ ಕೂಡ ಅದನ್ನು ಸಾಬೀತುಪಡಿಸುತ್ತೇವೆ ಎಂದು ಹೇಳಿದರು.

    ಬಿಜೆಪಿ ರ‌್ಯಾಲಿಗೆ ಸೆಡ್ಡು ಹೊಡೆದ ಜೆಡಿಎಸ್ ಮೆರವಣಿಯಲ್ಲಿ  ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ

    ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಗುರುವಾರ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸೆಡ್ಡು ಹೊಡೆದು ಬೃಹತ್ ರ‌್ಯಾಲಿ ನಡೆಸುವ ಮೂಲಕ ದಳಪತಿಗಳು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts