ಬಿಇಒ ಕಚೇರಿಗಾಗಿ ಅಧಿವೇಶನದಲ್ಲಿ ಧ್ವನಿ

23 KAMPLI 02
Published on

ಕಂಪ್ಲಿ: ಬಿಇಒ ಕಚೇರಿ ಸ್ಥಾಪಿಸುವಂತೆ ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತರಿಗೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಚಿನ್ನಾಪುರ, ಪ್ರಭುಕ್ಯಾಂಪ್, ಅಂಜನಾಪುರ, ಹೊಸನೆಲ್ಲೂಡಿ ಗ್ರಾಮದಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಕಂಪ್ಲಿಯಲ್ಲಿ ಬಿಇಒ ಕಚೇರಿ ಅಗತ್ಯವಿದ್ದು, ಈ ಬಗ್ಗೆ ಅಧಿವೇಶನದಲ್ಲಿಯೂ ಧ್ವನಿ ಎತ್ತುವುದಾಗಿ ಹೇಳಿದರು.

ಮುಂದಿನ ಮಳೆಗಾಲ ಆರಂಭಕ್ಕೂ ಮುನ್ನವೇ ತುಂಗಭದ್ರಾ ಜಲಾಶಯಕ್ಕೆ ಎಲ್ಲ ಹೊಸ ಗೇಟ್‌ಗಳನ್ನು ಅಳವಡಿಸಬೇಕು. ನವೆಂಬರ್‌ನಲ್ಲಿ 60 ಟಿಎಂಸಿ ನೀರು ಸಂಗ್ರಹವಿದ್ದರೆ ಎರಡನೇ ಬೆಳೆಗೆ ನೀರೊದಗಿಸಬೇಕು. ಅಧಿಕಾರಿಗಳು ಜೋಳದ ಬೆಳೆ ಸರ್ವೇ ಮಾಡುವಲ್ಲಿ ಎಡವಿದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಖರೀದಿಸುವಲ್ಲಿ ತೊಂದರೆಯಾಗಿದೆ. ರೈತರು ಬೆಳೆದಿರುವ ಜೋಳವನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಗಣೇಶ್ ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಪರಶುರಾಮ, ಭಾಸ್ಕರ, ಡಿಶ್ ಪ್ರಸಾದ್, ಶೇಖರ್, ಹೊನ್ನೂರಸ್ವಾಮಿ, ವೀರಭದ್ರಗೌಡ, ರಾಜನಗೌಡ, ಎನ್.ಮಲ್ಲಿಕಾರ್ಜುನ, ಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net