ಬಸ್ ಟಿಕೇಟ್‌ನಲ್ಲೂ ಮತದಾನ ಜಾಗೃತಿ

bkt-28-2
ಬಸ್ ಟಿಕೆಟ್‌ನಲ್ಲಿ ಮತದಾನ ಜಾಗೃತಿ.
Published on

ಬಾಗಲಕೋಟೆ: ಮತದಾನದ ಮಹತ್ವವನ್ನು ಸಾರಲು ಜಿಲ್ಲಾ ಸ್ವೀಪ್ ಸಮಿತಿಯು ಒಂದಿಲ್ಲ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಬಸ್ ಟಿಕೇಟ್, ಹೋಟಲ್ ಬಿಲ್ಲಗಳ ಮೇಲೆ ಮತದಾನದ ದಿನಾಂಕವನ್ನು ಮುದ್ರಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಬಾಗಲಕೋಟೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕವು ತಮ್ಮ ವ್ಯಾಪ್ತಿಯ ಎಲ್ಲ ಬಸ್ ಟಿಕೇಟ್‌ಗಳಲ್ಲಿ ಕೊನೆಯಲ್ಲಿ ಮೇ ೧೦ ರಂದು ತಪ್ಪದೇ ಮತದಾನ ಮಾಡಿ ಎಂಬ ಸಂದೇಶವನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಅದೇ ತೆರನಾಗಿ ಬೀಳಗಿಯ ಶ್ರೀಗುರು ಹಾಗೂ ಬಾಗಲಕೋಟೆ ನವನಗರದ ಕಾಮತ ಅನ್ನಲೀಲಾ ಹೋಟಲ್ ಬಿಲ್ಲುಗಳಲ್ಲಿಯೂ ಸಹ ಮತದಾನದ ದಿನಾಂಕವನ್ನು ನೆನಪಿಸುವ ಕಾರ್ಯ ಮಾಡಲಾಗುತ್ತಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ರೀತಿಯ ಪ್ರಯೋಗಗಳನ್ನು ಜಿಲ್ಲಾ ಸ್ವೀಪ್ ಸಮಿತಿ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net