ಪ್ರೌಢಶಾಲೆ ಕೊಠಡಿ ನಿರ್ಮಾಣಕ್ಕೆ ವಿ.ಪ ಸದಸ್ಯ ಚನ್ನರಾಜ ಭೂಮಿ ಪೂಜೆ

IMG-20250722-WA0080
Published on

ಪ್ರೌಢಶಾಲೆ ಕೊಠಡಿ ನಿರ್ಮಾಣಕ್ಕೆ ವಿ.ಪ ಸದಸ್ಯ ಚನ್ನರಾಜ ಭೂಮಿ ಪೂಜೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಯರಗಟ್ಟಿಯ ಬಸವೇಶ್ವರ ಪ್ರೌಢಶಾಲೆಗೆ ಮಂಜೂರಾದ ಕೊಠಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ವಿ.ಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯರ ನಿಧಿಯಲ್ಲದೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಜಿಲ್ಲಾದ್ಯಂತ ವಿವಿಧ ಅಭಿವೃದ್ದಿ ಕಾಮಗಾರಿ ನಡೆಸಲಾಗುತ್ತಿದೆ. ಸವದತ್ತಿ ತಾಲೂಕಿನಲ್ಲಿ ಸಹ ಶಾಸಕರ ಜತೆಗೆ ಅಭಿವೃದ್ಧಿ ಕಾಮಗಾರಿಗೆ ಕೈಜೋಡಿಸಿದ್ದೇನೆ ಎಂದು ತಿಳಿಸಿದರು.

ನೀಲಕಂಠ ಸಿದ್ದಬಸವಣ್ಣವರ, ಮಂಜು ತಡಸಲೂರ್, ಪಿ.ಎಚ್.ಪಾಟೀಲ, ವಿ.ಜಿ.ದೇವರೆಡ್ಡಿ, ಕಾಶೀಮ್ ಹೊರಟ್ಟಿ, ಸಲೀಂ ಜಮಾದಾರ, ಹನಮಂತ ಹಾರುಗೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net