ಪ್ರಾಣ ಉಳಿಸಲು ವೈದ್ಯರಾಗಬೇಕಾಗಿಲ್ಲ / ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸಬಹುದು / ಪಿಡಿಓ ನಾಗರಾಜ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಕ್ತವು ಇನ್ನೊಬ್ಬರಿಗೆ ನೀಡಬಹುದಾದ ಅತ್ಯಂತ ಅಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ. ಅಲ್ಲದೆ ಒಬ್ಬ ವ್ಯಕ್ತಿಯು ಜೀವಂತವಾಗಿರಲು ರಕ್ತ ಅತ್ಯಗತ್ಯ. ರಕ್ತದಾನ ಮಾಡಲು ಮುಂದೆ ಬರುವ ಜನರು ನಿಜ ಜೀವನದ ಸೂಪರ್ ಹೀರೋಗಳಾಗಿರುತ್ತಾರೆ ಎಂದು ಪಿಡಿಒ ನಾಗರಾಜ್ ಹೇಳಿದರು.

ತಾಲ್ಲೂಕಿನ ಹರಟಿ ಗ್ರಾಮದ ಸಮುದಾಯ ಭವನದಲ್ಲಿ ಹರಟಿ ಗ್ರಾಮ ಪಂಚಾಯಿತಿ, ಆರ್. ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಚಾಮರಹಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ರಕ್ತದಾನ ಮಾಡಿ ಮಾತನಾಡಿದರು.

ಜೀವವನ್ನು ಉಳಿಸಲು ನಾವು ವೈದ್ಯರಾಗಬೇಕಿಲ್ಲ, ರಕ್ತದಾನ ಮಾಡಿದರೆ ಸಾಕು, ರಕ್ತದಾನ ಮಾಡಿ ಜೀವ ಉಳಿಸಿದ ಸಂತೃಪ್ತಿ ಹೊಂದಬಹುದು. ಹಲವಾರು ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವವರು ದಾನಿಗಳು ಸಿಗದೇ ಪ್ರಾಣಗಳು ಕಳೆದುಕೊಂಡಿರುವ ಉದಾಹರಣೆಗಳು ಕಂಡಿದ್ದೇವೆ ಅಲ್ಲದೆ ಸಮಯಕ್ಕೆ ಸರಿಯಾಗಿ ಬೇಕಾದ ರಕ್ತದ ಗುಂಪು ಸಿಗದೇ ಸಾವು ಬದುಕಿನ ನಡುವೆ ಇರುವ ವ್ಯಕ್ತಿಯ ಸಂಬAಧಿಕರು ಪರದಾಡುವುದನ್ನು ನಾವೆಲ್ಲಾ ಸಾಮಾನ್ಯವಾಗಿ ಕಂಡಿದ್ದೇವೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತಿಯೊಬ್ಬರು ಇನ್ನೊಬ್ಬರ ಜೀವ ರಕ್ಷಿಸಲು ತುರ್ತು ಸಂದರ್ಭಗಳಲ್ಲಿ ರಕ್ತ ದಾನ ಮಾಡಿ ತಮ್ಮ ನಿಜ ನೀಜವನದಲ್ಲಿ ಹಿರೋಗಳಾಗಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ೧೮ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರಬಾಬು, ಚಾಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೌಮ್ಯ, ನಾರಾಯಣಸ್ವಾಮಿ, ಆರ್.ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದ ರಕ್ತಶಾಸ್ತ್ರ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹರಟಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಚಿತ್ರ ೧೯ ಕೆ.ಎಲ್.ಆರ್. ೦೬ : ಹರಟಿ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಪಿಡಿಓ ನಾಗರಾಜ್ ರಕ್ತ ನೀಡುವ ಮೂಲಕ ಚಾಲನೆ ನೀಡಿದರು. ಗ್ರಾಮಪಂಚಾಯ್ತಿ ಸದಸ್ಯ ನರೇಂದ್ರಬಾಬು, ವೈದ್ಯಾಧಿಕಾರಿ ಡಾ.ಸೌಮ್ಯ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net