ಪ್ರತಿ ಮಾಹೆ ಸಂಚಾರ ನಿಯಮಗಳ ಜಾಗೃತಿ

CTD----RTO
Published on

ಚಿತ್ರದುರ್ಗ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಚಾರ ನಿಯಮಗಳ ಉಲಂಘನೆ, ಅಸುರಕ್ಷಿತ ವಾಹನ ಚಾಲನೆ, ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುವುದು. ಕರ್ಕಶ ಹಾರನ್ ಅಳವಡಿಕೊಂಡು ಶಬ್ಧಮಾಲಿನ್ಯ ಉಂಟು ಮಾಡುವುದು. ವಾಹನ ಇಂಜಿನ್‌ಗಳ ಕಳಪೆ ನಿರ್ವಹಣೆಯಿಂದ ವಾಹನಗಳು ಹೊರಸೂಸುವ ಅಪಾಯಕಾರಿ ಅನಿಲಗಳಿಂದ ವಾಯುಮಾಲಿನ್ಯ ಉಂಟಾಗುತ್ತಿರುವ ಕುರಿತು ದೂರುಗಳಿವೆ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ರಸ್ತೆ ಸುರಕ್ಷತೆ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳ ನಿಯಂತ್ರಣಕ್ಕೆ ಪ್ರತಿ ತಿಂಗಳು 5ರಂದು ಹಿರಿಯೂರು, 10 ರಂದು ಚಳ್ಳಕೆರೆ, 15 ರಂದು ಹೊಸದುರ್ಗ, 20ರಂದು ಮೊಳಕಾಲ್ಮೂರು, 25 ರಂದು ಹೊಳಲ್ಕೆರೆಯಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಲಿದೆ ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net