

ಯಲಬುರ್ಗಾ (ಕೊಪ್ಪಳ): ಪ್ರತಿಯೊಬ್ಬ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಪ್ರೋತ್ಸಾಹಿಸುವ ಮೂಲಕ ಅವರನ್ನು ಬೆಂಬಲಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಯಲಬುರ್ಗಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಇರುವ ಪ್ರತಿಭೆ ಗುರುತಿಸುವ ಕೆಲಸ ಮಾಡಿದಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಪ್ರತಿಯೊಬ್ಬ ಮಕ್ಕಳಲ್ಲೂ ಕೂಡ ವಿಶಿಷ್ಟ ಅಗಾಧಶಕ್ತಿ ಹಾಗೂ ವಿಭಿನ್ನ ಕಲೆಗಳು ಒಳಗೊಂಡಿರುತ್ತವೆ. ಅದನ್ನು ಪರಿಚಯಿಸುವ ಕೆಲಸ ನಾವುಗಳು ಮಾಡಬೇಕು ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್.ಶ್ಯಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಲು ಸರ್ಕಾರ ಇಂತಹ ಕಾರ್ಯಕ್ರಮ ಅನು?್ಠಾನಗೊಳಿಸಿ ಅವರ ಪ್ರತಿಭೆ ಹೊರಹೊಮ್ಮಲು ಇಂಥ ವೇದಿಕೆಗಳು ತುಂಬಾ ಸಹಕಾರಿಯಾಗಿದೆ ಎಂದರು. ಮುಖ್ಯಶಿಕ್ಷಕ ಅಖಂಡಪ್ಪ ಮಾಯಾಚಾರಿ, ಸಿಆರ್‌ಪಿ ವೀರಪ್ಪ ಗಾಣಗೇರ, ಶಿಕ್ಷಕ ಮಹೇಶ ಆರೇರ್ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಮೂಲಿಮನಿ, ಗ್ರಾಪಂ ಸದಸ್ಯರಾದ ನಗೀನಾಬೇಗಂ ನೂರ್‌ಭಾ?, ಮಹಾದೇವಿ ಶಿರೂರು, ಮಂಜುನಾಥ ಮಾದರ, ಶಿಕ್ಷಕರ ಸಂಘದ ಕಾರ್ಯದರ್ಶಿ ಸಿದ್ದಲಿಂಗಪ್ಪ ಶ್ಯಾಗೋಟಿ, ಶಿಕ್ಷಕರರಾದ ಶರಣಯ್ಯ ಸರಗಣಾಚಾರ್, ಕಳಕಮಲ್ಲಪ್ಪ ಅಂತೂರು, ಖಾದರ್ ಭಾಷಾ, ಚಂದ್ರಪ್ಪ ರಾಜೂರು, ಪ್ರಮುಖರಾದ ಶಿವಕುಮಾರ ನಾಗನಗೌಡ್ರು, ರಾಜಶೇಖರ ಶ್ಯಾಗೋಟಿ ಇದ್ದರು.