ಪುರಿ ಜಗನ್ನಾಥ್​ ಜತೆ ಯಶ್ ಸಿನಿಮಾ?

Puri Yash
Published on

ಸ್ಯಾಂಡಲ್​ವುಡ್​ನ ಬಹುತೇಕ ಎಲ್ಲ ಸ್ಟಾರ್ ನಟರ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಗೊತ್ತಿದೆ. ಸದ್ಯ ನಟಿಸುತ್ತಿರುವ ಮತ್ತು ಮುಂದೆ ನಟಿಸಬೇಕಿರುವ ಚಿತ್ರಗಳನ್ನೂ ಕೆಲವರು ಘೋಷಿಸಿ ಕೊಂಡಿದ್ದಾರೆ. ಆದರೆ, ನಟ ಯಶ್ ಅವರನ್ನು ಬಿಟ್ಟು! ಹೌದು, ‘ಕೆಜಿಎಫ್ ಚಾಪ್ಟರ್ 2’ ಮುಗಿದ ಮೇಲೆ ಯಶ್ ಮುಂದಿನ ಚಿತ್ರ ಯಾವುದು? ಈಗಲೂ ಆ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇ. ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆಯಾದರೂ, ಅದಿನ್ನೂ ಅಧಿಕೃತವಾಗಿಲ್ಲ. ಬೇರೆ ಭಾಷೆಯ ನಿರ್ದೇಶಕರ ಹೆಸರು ತಳುಕು ಹಾಕಿಕೊಂಡರೂ ಆ ಬಗ್ಗೆಯೂ ಯಶ್ ತುಟಿ ಬಿಚ್ಚಿಲ್ಲ.

ಇದೀಗ ಅಂಥ ಸುದ್ದಿಗಳಿಗೆ ಮತ್ತೊಂದು ಸುದ್ದಿ ಜತೆಯಾಗಿದೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಯಶ್​ಗೆ ನಿರ್ದೇಶನ ಮಾಡಲಿದ್ದಾರಂತೆ. ಈ ಹಿಂದೆಯೇ ಈ ಬಗ್ಗೆ ಗಾಸಿಪ್ ಹರಿದಾಡಿದ್ದರೂ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಯಶ್ ‘ಕೆಜಿಎಫ್’ ಬಿಡುಗಡೆ ಕಡೆಗೆ ಗಮನ ಹರಿಸಿದ್ದಾರೆ. ಇತ್ತ ವಿಜಯ್ ದೇವರಕೊಂಡ ಅವರೊಂದಿಗೆ ‘ಲೈಗರ್’ ಚಿತ್ರದಲ್ಲಿ ಜಗನ್ನಾಥ್ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net