ಪರಿಸರ ದಿನಾಚರಣೆ:ಪುಟ್ಟಡವಿ ನಿರ್ಮಾಣ ಕಾರ್ಯಕ್ರಮ ಚಾಲನೆ

ಪರಿಸರ ದಿನಾಚರಣೆ:ಪುಟ್ಟಡವಿ ನಿರ್ಮಾಣ ಕಾರ್ಯಕ್ರಮ ಚಾಲನೆ
Published on

ಹಾಸನ: ಪರಿಸರ ಸಮತೋಲನ ಸಾಧ್ಯವಾಗಬೇಕೆಂದೆರೆ ಮರಗಿಡಗಳ ಸಂಖ್ಯೆ ಹೆಚ್ಚಾಗಬೇಕು. ನಗರ ಪ್ರದೇಶಗಳಲ್ಲಿ ಕಡಿಮೆ ಅವಧಿಯಲ್ಲಿ ಬೆಳೆಯುವ ಗಿಡಗಳ ನೆಡುವತ್ತ ಗಮನ ಹರಿಸಬೇಕೆಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು
ನಗರದ ಕೇಂದ್ರ ಗ್ರಂಥಾಲಯ ನೂತನ ಕಟ್ಟಡದ ಹಿಂಭಾಗದ ಖಾಲಿ ಜಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಸಿರುಭೂಮಿ ಪ್ರತಿಷ್ಠಾನ, ನಗರ ಕೇಂದ್ರ ಗ್ರಂಥಾಲಯ, ಅರಣ್ಯ ಇಲಾಖೆ, ಮುಂಜಾನೆ ಮಿತ್ರರು ಎವಿಕೆ ಕಾಲೇಜು ಮತ್ತು ಎಂ. ಕೃಷ್ಣ ಕಾನೂನು ಕಾಲೇಜು, ಎನ್‌ಎಸ್‌ಎಸ್ ಘಟಕದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪುಟ್ಟಡವಿ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅರಣ್ಯ ಪ್ರದೇಶ ವಿಸ್ತರಿಸುವ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಹೊಸ ಮಾದರಿ ಎಂದರೆ ನಗರದ ಪ್ರದೇಶದಲ್ಲಿ ದಟ್ಟವಾಗಿ ಹಾಗು ಕಡಿಮೆ ಅವಧಿಯಲ್ಲಿ ಬೆಳೆಯುವ ಗಿಡಗಳಿಗೆ ಆದ್ಯತೆ ನೀಡಬೇಕು. ವಿವಿಧ ಸಂಘಟನೆಗಳ ಸಹಕಾರದಿಂದ 200 ಗಿಡವನ್ನು ಹಾಕಿ ಕಾಡು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನೂರುವರ್ಷದಲ್ಲಿ ಬೆಳೆಯುವ ಗಿಡ 20 ವರ್ಷದಲ್ಲಿ ಬೆಳೆಯುವ ಪ್ರಯೋಗವನ್ನು ಹಾಸನದಲ್ಲಿ ಮಾಡಲಾಗುತ್ತಿದ್ದು, ಎಲ್ಲಾರು ಅಗತ್ಯ ಸಹಕಾರ ನೀಡುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳು ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಂ.ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ಎವಿಕೆ ಕಾಲೇಜು ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್‌ಮೂರ್ತಿ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ಡಾ.ಸಾವಿತ್ರಿ, ಡಾ.ಸೌಮ್ಯ, ಡಾ. ತೇಜಸ್ವಿ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಅರ್ಜುನ್ ಶೆಟ್ಟಿ, ಗುರುರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net