ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸಿ

2706 Surapur 01
Published on

ಸುರಪುರ: ಕೃಷಿ ಕೂಲಿಕಾರರಿಗೆ ಈ ಮೊದಲು ಸಾಕಷ್ಟು ಕೆಲಸ ಸಿಗುತ್ತಿತ್ತು. ಆದರೆ ಈಗ ಯಾಂತ್ರೀಕರಣದಿAದ ಅದು ಕಡಿತಗೊಂಡಿದ್ದು, ಹೀಗಾಗಿ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವುಲ್‌ಸಾಬ್ ನದಾಫ್ ಹೇಳಿದರು.

ತಾಲೂಕು ಸಮಿತಿಯಿಂದ ರತ್ತಾಳ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಗ್ರಾಮದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯಂತ್ರಗಳ ಮೂಲಕ ಬಿತ್ತನೆ, ರಾಶಿ ಮಾಡುವುದು ಯಂತ್ರಗಳಿAದಲೇ ಮಾಡುತ್ತಿರುವುದರಿಂದ ಕೆಲಸ ಸಿಗದಂತಾಗಿದ್ದು, ಇದರಿಂದ ಕೃಷಿ ಕೂಲಿಕಾರರು ವಲಸೆ ಹೋಗುವುದು ಹೆಚ್ಚಾಗಿದೆ ಎಂದರು.

ನಗರ ಪ್ರದೇಶಗಳಲ್ಲಿಯೂ ದೊಡ್ಡ ಕ್ರೇನ್‌ಗಳು, ಜೆಸಿಬಿ ಯಂತ್ರಗಳು ಸಾವಿರಾರು ಜನರ ಕೆಲಸ ಕಸಿದು ಕೊಂಡಿವೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರ ಪರಿಸ್ಥಿತಿ ಅಲ್ಲಿಯೂ ಸಹ ಚಿಂತಾಜನಕವಾಗಿದೆ. ಕಾರಣ ವಲಸೆ ತಡೆಗಟ್ಟಲು ಕೃಷಿ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ೨೦೦ ದಿನ ಕೆಲಸ ಅದು ದಿನಕ್ಕೆ ೬೦೦ ರೂ.ಕೂಲಿ ಕೊಡಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಮಾಡಬೇಕು. ಎಲ್ಲಾ ಬಡವರಿಗೆ ಮನೆ, ಭೂಮಿ ನಿವೇಶನ, ಬ್ಯಾಂಕ್ ಸಾಲ ಸಿಗುವಂತಾಗಬೇಕು ಎಂದು ಸರಕಾರಕ್ಕೆ ಒತ್ತಾಯಿಸಲು ಸಮ್ಮೇಳನದಲ್ಲಿ ಮುಂದಿನ ಹೋರಾಟದ ರೂಪರೇಷಗಳನ್ನು ಮಾಡಲಾಯಿತು. ಸುಮಂಗಲಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಜಂಬಲದಿನ್ನಿ, ಜಿಲ್ಲಾ ಕಾರ್ಯದರ್ಶಿ ಅಯ್ಯಪ್ಪ ಅನುಸೂರ್, ಹಣಮಂತ ರತ್ತಾಳ ಇದ್ದರು.

ಬಳಿಕ ಗ್ರಾಮ ಘಟಕ ರಚನೆ ಮಾಡಲಾಯಿತು. ದೇವಿಂದ್ರಮ್ಮ (ಅಧ್ಯಕ್ಷೆ), ತಾಯಮ್ಮ, ಯಂಕಪ್ಪ (ಉಪಾಧ್ಯಕ್ಷೆ), ಹೊನ್ನಕೇರಪ್ಪ (ಕಾರ್ಯದರ್ಶಿ), ಶಶಿಕಲಾ ತಟ್ಟೆಮನಿ, ಭೀಮಣ್ಣ ಜಿಗಳಿ (ಸಹ ಕಾರ್ಯದರ್ಶಿ), ಅಂಕಿತ್ ಪೊಲೀಸ್ ಪಾಟೀಲ್, ಚಂದ್ರಪ್ಪ ಗಡ್ಡರ್, ತಾಯಮ್ಮ, ಭೀಮಣ್ಣ, ರಾಯಮ್ಮ (ಸದಸ್ಯರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net