ನಮ್ಮ ಮೇಲೆ ಕ್ಷಣದಲ್ಲೇ ಕೇಸ್​, ಸಚಿವರ ಮೇಲೇಕೆ ಕೇಸ್​ ತಗೊಳ್ಳಲ್ಲ ?; ಮಣಿಕಂಠ ರಾಠೋಡ್​

PH 04
Published on

ಚಿತ್ತಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿAದ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರಿಗೆ ಸಾರ್ವಜನಿಕರು ಕಣ್ಣಿಗೆ ಕಾಣುತ್ತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯAತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಆರೋಪಿಸಿದರು.

ಪೊಲೀಸರು ಜನ ಸಾಮಾನ್ಯರ ದೂರುಗಳನ್ನು ತೆಗೆದುಕೊಳ್ಳಲ್ಲ. ತಮ್ಮ ವಿರುದ್ಧ ಹೋರಾಟ ಹಾಗೂ ಮಾತನಾಡುವವರನ್ನು ವಿರುದ್ಧ ಸುಳ್ಳು ಕೇಸ್ ಹಾಕಿಸುವ ಮೂಲಕ, ಸಚಿವ ಖರ್ಗೆ ಅವರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜೇವರ್ಗಿಯಲ್ಲಿ ಉದ್ದೇಶಪೂರ್ವಕವಾಗಿಯೇ ನಮ್ಮ ಕಾರ್ಯಕರ್ತರ ಮೇಲೆ ಫೈರಿಂಗ್ ಮಾಡಲಾಯಿತು. ಕಲಬುರಗಿಯಲ್ಲಿ ಲಾಕಪ್ ಡೆತ್ ಆಯಿತು. ಪೊಲೀಸರು ಜನರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ತಮಗೆ ಇಷ್ಟ ಬಂದAತೆ ವರ್ತಿಸುತ್ತಿದ್ದಾರೆ ಎಂದು ಬುಧವಾರ ರಾತ್ರಿ ಮಾಡಬೂಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕ್ಷೇತ್ರದ ಜನರಿಗಾಗಿ ನಾನು ಯಾವುದೇ ಹೋರಾಟ ಮಾಡಲು ಸಿದ್ಧ, ಸದಾ ಜನರ ಪರ ನಿಲ್ಲುತ್ತೇನೆ. ಪೊಲೀಸರ ಕಿರುಕುಳದಿಂದಲೇ ಕಲಗುರ್ತಿ ಗ್ರಾಮದ ದೇವಾನಂದ ಕೊರಬಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾರಣರಾದವರನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ. ಆತ್ಮಹತ್ಯೆಯ ಹಿಂದೆ ಇರುವ ಆರೋಪಿಗಳನ್ನು ವಾರದೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ಪ್ರಮುಖರಾದ ಬಾಬುಮಿಯ್ಯ ಕಲಗುರ್ತಿ, ತಮ್ಮಣ ಡಿಗ್ಗಿ, ಸಾಬಣ್ಣ ಜಾಲಗಾರ್, ಮಹೇಶ್ ಬಾಳಿ, ಶಂಕರ ಚವ್ಹಾಣ್, ವಿಜಯಕುಮಾರ ನಿಂಗದೆ, ವೀರಣ್ಣ ಯಾರಿ, ವಿಜಯಕುಮಾರ ಗುಂಡಗುರ್ತಿ, ಶಂಭು ಭಂಗಿ, ಸೋಮಶೇಖರ್ ಐನಾಪುರ, ದಶರಥ ದೊಡ್ಡಮನಿ, ಮಹೇಶ ಗೌಳಿ, ಶ್ರೀಕಾಂತ್ ಸುಲೇಗಾಂವ್ ಇತರರಿದ್ದರು.

ಸಚಿವರ ವಿರುದ್ಧ ಯಾಕೆ ಕೇಸ್ ತಗೊಳಲ್ಲ ?: ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ ಪ್ರಕರಣದಡಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಬೂಳ ಠಾಣೆಯಲ್ಲಿ ಕೇಸ್ ನೀಡಿದರೂ ಎï‌ಐಆರ್ ಮಾಡಿಕೊಳ್ಳುತ್ತಿಲ್ಲ. ಕೇವಲ ಸ್ವೀಕೃತಿ ಪತ್ರ ನೀಡಿ ಕಳಿಸುತ್ತಿದ್ದಾರೆ ಎಂದು ಮುಖಂಡ ಮಣಿಕಂಠ ರಾಠೋಡ್ ದೂರಿದರು. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸರೇ ರೌಡಿಗಳನ್ನು ಸಾಕುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವುದಲ್ಲದೆ, ಕೆಲ ಅಧಿಕಾರಿಗಳನ್ನು ಸಭೆಯಲ್ಲಿ ಎದ್ದು ನಿಲ್ಲಿಸಿ ಅವಮಾನಿಸಿದ್ದಾರೆ. ಕೆಲವರು ಮಾಡಿದ ಕೆಲಸಕ್ಕಾಗಿ ಎಲ್ಲ ಪೊಲೀಸರನ್ನು ದೂರುವುದು ಸರಿಯಲ್ಲ. ಹೀಗಾಗಿ ಕೇಸ್ ದಾಖಲಿಸಿ ಎಂದು ದೂರು ನೀಡಿದರೂ, ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ನಮ್ಮ ಮೇಲೆ ಕೂಡಲೇ ಎï‌ಐಆರ್ ಆಗುತ್ತದೆ, ಬಂಧಿಸುತ್ತಾರೆ. ಆದರೆ ಸಚಿವರ ಮೇಲೆ ಕೇಸ್ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುವುದು ಎಷ್ಟು ಸರಿ ? ಇದು ಯಾವ ಸೀಮೆ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ, ನಾನು ಅಭ್ಯರ್ಥಿಯಲ್ಲ: ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಾನಲ್ಲ. ಯಾರು ಎಲೆಕ್ಷನ್​ಗೆ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಮಣಿಕಂಠ ರಾಠೋಡ್ ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ನನ್ನ ವಿರುದ್ಧ ಪಿತೂರಿ ಮಾಡಿ, ಬೇನಾಮಿ ಹಣ ಹಾಗೂ ಮದ್ಯ ಹಂಚಿಕೆ ಗೆದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಕುಟುಂಬದವರು ಸ್ಪರ್ಧಿಸಿದರೆ, ಪ್ರತಿ ಹಳ್ಳಿಗೂ ಭೇಟಿ ನೀಡಿ ಅವರ ವಿರುದ್ಧ ಪ್ರಚಾರ ಮಾಡುವೆ. ಬೇನಾಮಿ ಆಸ್ತಿ ಹಾಗೂ ಅಕ್ರಮಗಳ ಬಗ್ಗೆ ಜನತೆಗೆ ತಿಳಿಸುವೆ. ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net