

ಮೂಡಿಗೆರೆ: ನಂದಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ರಮೇಶ್ ಅವಿರೋಧವಾಗಿ ಆಯ್ಕೆಯಾದರು.
ಜೆಡಿಎಸ್‌ನಲ್ಲಿ ನಡೆದಿದ್ದ ಆಂತರಿಕ ಒಪ್ಪಂದದಂತೆ ರಘು ರಾಜೀನಾಮೆ ನೀಡಿದ್ದರು. 8 ಸದಸ್ಯ ಬಲದ ನಂದಿಪುರ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 1, ಬಿಜೆಪಿ ಬೆಂಬಲಿತ 1 ಸದಸ್ಯರಿದ್ದಾರೆ. ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಎಂ.ಎಸ್.ರಮೇಶ್ ಸತತವಾಗಿ 4ನೇ ಅವಧಿಗೆ ನಂದಿಪುರ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ 3ನೇ ಬಾರಿ ಅಧ್ಯಕ್ಷರಾಗಿದ್ದಾರೆ. ಎರಡು ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಉಪಾಧ್ಯಕ್ಷೆ ನಳಿನಿ, ಪ್ರಸನ್ನ, ರಘು, ಲೀಲಾ, ಶಶಿಕಲಾ, ಭಾರತಿ, ಸುಂದರೇಶ್, ಪಿಡಿಒ ಪ್ರತಿಮಾ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಎಂ.ಎಲ್.ಕಲ್ಲೇಶ್, ದೀಪಕ್ ದೊಡ್ಡಯ್ಯ, ಗಬ್ಬಳ್ಳಿ ಚಂದ್ರೇಗೌಡ, ಎಂ.ಎನ್.ಅಶ್ವತ್ಥ್, ಎಂ.ಸಿ.ಹೂವಪ್ಪ ಇತರರಿದ್ದರು.