ದೇವಸ್ಥಾನದ ಜಮೀನನ್ನು ಅರ್ಚಕರು ಅಕ್ರಮವಾಗಿ ಖಾತೆ:ಗ್ರಾಮಸ್ಥರಿಂದ ಪ್ರತಿಭಟನೆ

ದೇವಸ್ಥಾನದ ಜಮೀನನ್ನು ಅರ್ಚಕರು ಅಕ್ರಮವಾಗಿ ಖಾತೆ:ಗ್ರಾಮಸ್ಥರಿಂದ ಪ್ರತಿಭಟನೆ
Published on

ಹಾಸನ: ತಾಲೂಕಿನ ಯಡಿಯೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಜಮೀನನ್ನು ಅರ್ಚಕರು ಅಕ್ರಮವಾಗಿ ಖಾತೆ ಮಾಡಿಕೊಂಡು ಬೇರೆಯವರಿಗೆ ಮಾರಾಟ ಮಾಡಲಾಗಿದ್ದು, ಈ ಆಸ್ಥಿಯನ್ನು ಗ್ರಾಮದ ಬಸವಣ್ಣ ದೇವರ ಹೆಸರಿಗೆ ಖಾತೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಸವೇಶ್ವರ ದೇವಸ್ಥಾನದ ಜಮೀನನ್ನು ಅರ್ಚಕರು ಅಕ್ರಮವಾಗಿ ಖಾತೆ ಮಾಡಿಕೊಂಡು ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಆಸ್ತಿಯನ್ನು ದೇವಸ್ಥಾನದ ಹೆಸರಿಗೆ ಖಾತೆ ಮಾಡಬೇಕೆಂದು ಬಸವೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಪ್ರತಿಭಟನೆ ನಡೆಸಿ,
ಸರ್ವೆ ನಂ. 73/10 ರಲ್ಲಿ 38 ಗುಂಟೆ, ಸರ್ವೆ ನಂ. 50 ರಲ್ಲಿ 35 ಗುಂಟೆ ಜಮೀನನ್ನು ದಾನಿಗಳು ದೇವಸ್ಥಾನಕ್ಕಾಗಿ ನೀಡಿದ್ದರು. ಜಮೀನಿನ ಮೂಲ ಖಾತೆ ದೇವಾಲಯ ಹೆಸರಿನಲ್ಲೇ ಇದ್ದರೂ ಅರ್ಚಕರು ಪ್ರಭಾವ ಬಳಸಿ ತಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ನಂತರ ಅರ್ಚಕನಿಂದ ಆತನ ಹೆಂಡಿ ಹಾಗು ಪತ್ನಿಗೆ ಖಾತೆಯಾಗಿದೆ. ದೇವಾಲಯಕ್ಕೆ ಮೀಸಲಿಟ್ಟಿದ್ದ ಜಾಗ ಖಾಸಗಿ ಸ್ವತ್ತಾಗಲು ಬಿಡಬಾರದು. ದೇವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗಿದ್ದು ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ. ಆದರೆ ಅರ್ಚಕ ಕುಟುಂಬದವರು ಆ ಜಮೀನನ್ನು ಮಾರಾಟ ಮಾಡಲು ಯತ್ನಿಸಉತ್ತಿದ್ದಾರೆ. ಅರ್ಚಕರು ಜಮೀನಿನ ಮಾಲೀಕರಲ್ಲ. ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆಸ್ತಿ ಅನ್ಯರ ಪಾಲಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಮದ ಮಂಜೇಗೌಡ, ನಿಂಗೇಗೌಡ, ರಮೇಶ್, ಲೋಕೇಶ್, ಆನಂದ್, ಮಂಜುನಾಥ್, ಕುಮಾರ್, ಪೂರ್ಣೇಶ್, ಬೂದೇಶ್, ನಾಗರಾಜು, ಸುಬ್ಬೇಗೌಡ, ರೇವಣ್ಣ ಇತರರಿದ್ದದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net