ದಿನದ ಪಾಸಿಟಿವಿಟಿ ದರ ಶೇ. 1.85ಕ್ಕೆ ಇಳಿಕೆ : ಗುಣಮುಖರ ಸಂಖ್ಯೆ 8.20ಲಕ್ಷ ಏರಿಕೆ

corona images
Published on

ಬೆಂಗಳೂರು : ರಾಜ್ಯದಲ್ಲಿ ಶನಿವಾರ 2,198 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 8.20ಲಕ್ಷ ಏರಿಕೆಯಾಗಿದೆ.

ಇನ್ನು ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, 2,154 ಸೋಂಕು ಪ್ರಕರಣ ವರದಿಯಾಗುವ ಮೂಲಕ ದಿನದ ಪಾಸಿಟಿವಿಟಿ ದರ ಶೇ. 1.85ಕ್ಕೆ ಇಳಿಕೆಯಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 8.60 ಲಕ್ಷಕ್ಕೆ ಏರಿಕೆಯಾಗಿದೆ. 17 ಸೋಂಕಿತರ ಸಾವಿನೊಂದಿಗೆ ಮೃತರ ಸಂಖ್ಯೆ 11,508 ಕ್ಕೆ ಹೆಚ್ಚಿದೆ. ದಿನದ ಸಾವಿನ ಪ್ರಮಾಣ ಶೇ. 0.78ಕ್ಕೆ ಇಳಿಕೆಯಾಗಿದೆ.

ಸೋಂಕು ಇಳಿಕೆಯೊಂದಿಗೆ ಸಕ್ರಿಯ ಪ್ರಕರಣಗಳು 27,965ಕ್ಕೆ ಕುಸಿದಿದ್ದು, ಸೋಂಕಿತರು ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ 773 ಮಂದಿ ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣ ರಹಿತ ಸೋಂಕಿತರು ಮನೆ ಆರೈಕೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net