

ದಾವಣಗೆರೆ: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಜಿಲ್ಲೆ ಶೇಕಡವಾರು 90.12 ಫಲಿತಾಂಶದೊಂದಿಗೆ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ 14ನೇ ಸ್ಥಾನ ಪಡೆದಿದೆ.
*127 ಶಾಲೆಗಳ ಸೆಂಚುರಿ
127 ಶಾಲೆಗಳು ಪೂರ್ಣ ಶೇ.ನೂರರಷ್ಟು ಫಲಿತಾಂಶ ಪಡೆದಿವೆ. ಈ ಪೈಕಿ ಸರ್ಕಾರಿ ಶಾಲೆಗಳು 50, ಅನುದಾನಿತ 26, ಅನುದಾನರಹಿತ 51 ಶಾಲೆಗಳಿವೆ.
ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಹಳ್ಳಿ ಮಹದೇವಪ್ಪ ಶಾಲೆ, ಸುಂದರಮ್ಮ ಶಾಲೆ, ಡಾ.ಬಿ.ಎಂ.ತಿಪ್ಪೇಸ್ವಾಮಿ ಸ್ಮಾರಕ ಶಾಲೆ, ಎಸ್ಸಿ-ಎಸ್ಟಿ ವಸತಿ ಶಾಲೆ, ಹೊನ್ನಾಳಿ ತಾಲೂಕು ಬೆಳಗುತ್ತಿಯ ಎಸ್‌ಟಿಎಲ್ ನ್ಯಾಷನಲ್ ಶಾಲೆ ಸೇರಿ ಐದು ಅನುದಾನಿತ ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿವೆ.
* ಆರು ಮಂದಿ ಟಾಪರ್‌ಗಳು ಸಿದ್ಧಗಂಗಾ ಶಾಲೆಯ ಆರ್. ಚೇತನಾ 624 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎ.ಆರ್.ಮಂಜುನಾಥ ಎಂ.ಬಿ.ಶ್ವೇತಾ ದಂಪತಿಯ ಪುತ್ರಿ, ಅನುಭವಮಂಟಪ ಶಾಲೆಯ ಎ.ಎಂ. ಚಿನ್ಮಯಿ ಹಾಗೂ ಜಗಳೂರಿನ ಜೆ.ಎಂ. ಇಮಾಂ ಸ್ಮಾರಕ ಶಾಲೆಯ ಎಂ. ಅನನ್ಯಾ (ಜೆ.ಮಂಜುನಾಥ, ಎಸ್,.ಡಿ. ಸವಿತಾ ಪಾಲಕರು)ಇಬ್ಬರೂ 621 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 619 ಅಂಕ ಪಡೆದ ಮೂವರು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಬಸವರಾಜ್ ಮುತ್ತಗಿ-ಶಾರದಾ ದಂಪತಿಯ ಪುತ್ರಿ ಹಾಗೂ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಬಸವರಾಜ್ ಮುತ್ತಗಿ, ಶಂಷೀರ್ ಅಹ್ಮದ್-ಫರೀದುನ್ನೀಸಾ ಖಾನುಂ ದಂಪತಿಯ ಪುತ್ರಿ ಹಾಗೂ ಜಗಳೂರಿನ ಆರ್‌ವಿಎಸ್ ವಿದ್ಯಾಪೀಠದ ವಿದ್ಯಾರ್ಥಿನಿ ಜೆ.ಎಸ್.ತಹಮಿನಾ ಖಾತೂನ್ ಎಸ್.ಹನುಮಂತಗೌಡ-ಎಸ್.ಗೀತಾ ದಂಪತಿಯ ಪುತ್ರಿ, ಜಗಳೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಎಸ್.ಸ್ನೇಹಾ ಮೂರನೇ ಸ್ಥಾನ ಪಡೆದಿದ್ದಾರೆ. ----