ಡ್ರಗ್ಸ್ ಜಾಲದ ಮೂಲ ಬೇಧಿಸಿದ ಮಂಗಳೂರು ಪೊಲೀಸರು ಮತ್ತೆ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

IMG-20210629-WA0005
Published on


ಮಂಗಳೂರು: ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ ಪೊಲೀಸರು ಮತ್ತೆ ಇಬ್ಬರು ನೈಜೀರಿಯಾಗ ಪ್ರಜೆಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪೌಲ್ ಒಹಮೊಬಿ ಯಾನೆ ಇಫೆಚುಕು ಮತ್ತು ಉಚಿಚುಕು ಮಲಾಕಿ ಎಲಕ್ವಾಚಿ ಬಂಧಿತರು. ಜೂ.೩ರಂದು ಕೇರಳ ಉಪ್ಪಳದ ಅಬ್ದುಲ್ ಮನಾಫ್, ಮಹಮ್ಮದ್ ಮಝಾಂಬಿಲ್, ಅಹ್ಮದ್ ಮಸೂಕ್ ಎಂಬವರನ್ನು ಬಂಧಿಸಿ ೧೭೦ ಗ್ರಾಂ ಎಂಡಿಎAಎ ಮತ್ತು ವಾಹನ ವಶಕ್ಕೆ ಪಡೆಯಲಾಗಿತ್ತು. ಜೂ.೧೩ರಂದು ಕೇರಳ ಉಪ್ಪಳದ ಶಫೀಕ್, ಅಲ್ತಾಫ್ ಎಂಬವರನ್ನು ಬಂಧಿಸಲಾಗಿತ್ತು. ಅವರಿಂದ ೬೫ ಗ್ರಾಂ ಎಂಡಿಎAಎ ವಶಕ್ಕೆ ಪಡೆಯಲಾಗಿತ್ತು. ಎರಡೂ ಪ್ರಕರಣದ ಆರೋಪಿಗಳನ್ನು ವಿಚಾರಿಸಿದಾಗ ಬೆಂಗಳೂರಿನ ಡೀಲರ್‌ಗಳಾದ ನೈಜೀರಿಯಾ ಪ್ರಜೆಗಳು ನೀಡಿರುವುದನ್ನು ಹೇಳಿದ್ದರು. ಅದರಂತೆ ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಡ್ರಗ್ಸ್ ಜಾಲದ ಮೂಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net