ಡ್ರಗ್ಸ್,ಸೈಬರ್ ಕ್ರೈಂ ದೇಶಕ್ಕೆ ಅಂಟಿದ ಮಹಾ ಸಾಂಕ್ರಾಮಿಕ ರೋಗ

IMG-20230714-WA0016---05
Published on

ಚಿತ್ರದುರ್ಗ: ಕುತಂತ್ರಿಗಳ ಬೀಸುವ ಜಾಲಕ್ಕೆ ತಮಗರಿವಿಲ್ಲದೆ ಅನೇಕರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ,ಕೆಲವೊಮ್ಮೆ ಈ ದುಷ್ಕರ್ಮಿಗಳ ಕೃತ್ಯ ಕೆಲ ವೊಮ್ಮೆ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂದು ಸೈಬರ್ ಅಪಾರಧಗಳೆಡೆ ನಗರದ ಸಿಇಎನ್ ಠಾಣೆ ಪಿಐ ವೈ.ಎಚ್.ರಮಾಕಾಂತ್ ಆತಂಕ ವ್ಯಕ್ತಪಡಿಸಿದರು.

ನಗರದ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸೈಬರ್ ಅಪರಾಧ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ‌್ಯಕ್ರ ಮದಲ್ಲಿ ಮಾತನಾಡಿದ ಅವರು,ಮಾದಕ ವಸ್ತು ಸೇವನೆ ವ್ಯಸನ ಹಾಗೂ ಸೈಬರ್ ಅಪರಾಧಗಳು ಈ ದೇಶಕ್ಕಂಟಿದ ಮಹಾ ಸಾಂಕ್ರಾಮಿಕ ರೋಗಗಳಾಗಿ ವೆ.

ವಿದ್ಯಾರ್ಥಿ,ಯುವ ಸಮೂಹ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು,ಇವತ್ತಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳೆಡೆ ಜಾಗೃತಿ ವಹಿಸ ಬೇಕು ಹಾಗೂ ಜನ ಸಾಮಾನ್ಯರಲ್ಲೂ ಅರಿವು ಮೂಡಿಸಬೇಕು. ಒಟಿಪಿ ಹೇಳುವಾಗ ಖಚಿತ ಪಡಿಸಿಕೊಳ್ಳ ಬೇಕು.

ಪೋನ್ ಕದ್ದಾಲಿಕೆ ಸಹಿತ ನಾನಾ ವಿಧಗಳ ಅಪರಾಧ ಕೃತ್ಯಗಳ ಕುರಿತು ಸಬ್‌ಇನ್ಸ್ಪೆಕ್ಟರ್ ಎ.ಮಂಜುನಾಥ್ ವಿವರಿಸಿದರು. ಮಾದಕ ವಸ್ತುಗಳ ಸೇವನೆ ವ್ಯಸನದ ಕುರಿತು ಮಾತನಾಡಿದ ಎಎಸ್‌ಐ ಡಿ.ಕರಿಯಪ್ಪ,ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಅಪರಾಧ ಕೃತ್ಯಗಳಾಗಿವೆ ಎಂದರು.

ಸಿಇಎನ್ ಠಾಣೆ ಅಪರಾಧ ವಿಭಾಗದ ಮಂಜುನಾಥ್,ಗಗನದೀಪ್,ಎಸ್‌ಜೆಎಂ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮು ಖ್ಯ ಸ್ಥ ಸಿ.ಜಿ.ರೇವಣಸಿದ್ದಪ್ಪ ಮತ್ತಿತರರು ಇದ್ದರು. ಕೆ.ಸುರೇಶ್‌ಪ್ರಾರ್ಥಿಸಿದರು. ಜೆ.ಪ್ರತಿಮಾ ಸ್ವಾಗತಿಸಿ,ಪಿ.ಎ.ರಘು ವಂದಿಸಿದರು. ಸವಿತಾ ಸುನಿಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net