

ಜೇವರ್ಗಿ: ಮಹಾಮಾರಿ ಕರೊನಾ ವೈರಸ್ ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳಲ್ಲಿ ಬುಧವಾರ ಬಿರುಗಾಳಿ ಎಬ್ಬಿಸಿದೆ. ತಂದೆ ಮತ್ತು ಇಬ್ಬರು ಮಕ್ಕಳಿಗೆ, ಅಲ್ಲದೇ ಅಕ್ಕ ತಮ್ಮನಿಗೆ ಸೇರಿ ಒಟ್ಟು 14 ಜನರಿಗೆ ಈ ಸೋಂಕು ತಗುಲಿದೆ. ದುಡಿಯಲೆಂದು ಮಹಾರಾಷ್ಟ್ರಕ್ಕೆ ಹೋಗಿ ಮರಳಿ ಬಂದವರಾಗಿದ್ದಾರೆ. ಇವರನ್ನು ತಾಲೂಕುಗಳ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಎರಡೂ ತಾಲೂಕುಗಳಲ್ಲಿ ಆತಂಕದ ಛಾಯೆ ಹೆಚ್ಚಾಗುತ್ತಿದೆ.
ಪಟ್ಟಣದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದ ಎರಡು ಕ್ವಾರಂಟೈನ್ ಕೇಂದ್ರಗಳಲ್ಲಿ ಕೂಟನೂರ ಗ್ರಾಮದ ಹೆಣ್ಣು ಮಗಳು ಮತ್ತು ಗಂಡು ಮಗುವಿಗೆ ಕರೋನಾ ಪಾಜಿಟಿವ್ ಬಂದಿದ್ದು, ಅಲ್ಲಿದ್ದ ಜನರಲ್ಲಿ ಇದು ಆತಂಕವನ್ನುಂಟು ಮಾಡಿದೆ.
ಈ ಮಕ್ಕಳ ತಾಯಿಯೂ ಇದೇ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ಮಾನವಿಯತೆ ಮೆರೆದ ತಹಸೀಲ್ದಾರ ಸಿದ್ದರಾಯ ಬೋಸಗಿ ಅವರು ತಾಲೂಕಾ ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ಅವರೊಂದಿಗೆ ಚಚರ್ಿಸಿ ಹಿರಿಯ ಅಧಿಕಾರಿಗಳಿಗೆ ಮಕ್ಕಳ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಟ್ಟು ದೂರದಲ್ಲಿಯೆ ಮಕ್ಕಳನ್ನು ಸಂತೈಸಲು ಅನುವು ಮಾಡಿಕೊಟ್ಟರು.
ರೇವನೂರ ತಾಂಡಾದ ತಂದೆ ಹಾಗೂ 17 ವರ್ಷದ ಮಗಳು, 13 ವರ್ಷದ ಮಗನಿಗೂ ಪಾಜಿಟಿವ್ ಬಂದಿದೆ. ಇನ್ನುಳಿದಂತೆ ರೇವನೂರಿನ 8 ಜನ, ಕೂಟನೂರ ಇಬ್ಬರು, ಯಾಳವಾರದ ಇಬ್ಬರು, ಗುಡೂರ ಎಸ್.ಎ, ಒಬ್ಬರು, ಬಿಳವಾರ ಒಬ್ಬರು, ಲಕಣಾಪುರ ಒಬ್ಬರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ 6370 ಜನ ಶಂಕಿತರ ರಕ್ತ, ಗಂಟಲು ಕ ಟೆಸ್ಟ್ಗೆ ಕಳುಹಿಸಲಾಗಿದ್ದು, 6136 ಜನರ ನೆಗೆಟಿವ್ ರಿಪೋಟರ್್ ಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 162 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು 27 ಕಂಟೇನ್ಮೆಂಟ್ ಜೋನ್ಗಳಿದ್ದು ಅವುಗಳಲ್ಲಿ 21 ಸಕ್ರೀಯವಾಗಿವೆ. ಈ ಜೋನ್ಗಳಡಿ 49631 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 1031, ಸೆಕಂಡರಿ ಕಾಂಟ್ಯಾಕ್ಟ್ಸ್ 3359, ವಿದೇಶದಿಂದ ಬಂದವರು 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 995 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1622 ಜನರನ್ನು ಮುಕ್ತಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1817 ಜನರನ್ನು ಮುಕ್ತಗೊಳಿಸಿ ಈ ನಂತರವೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸ್ವಯಂ ಪ್ರೇರಣೆಯಿಂದ ವರದಿ ಮಾಡುವಂತೆ ಸೂಚಿಸಲಾಗಿದೆ. 51ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾಡರ್್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.