ಚಂದ್ರಯಾನ ಯಶಸ್ಸು ವಿಜ್ಞಾನಿಗಳದ್ದೇ ಹೊರತು ಯಾವುದೇ ಪಕ್ಷದ್ದಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Mahadevappa
Published on

ಮೈಸೂರು: ಚಂದ್ರಯಾನ -3 ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕೆ ವಿನಾ ಯಾವುದೇ ಪಕ್ಷಕ್ಕೆ ಅಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ ಮಹದೇವಪ್ಪ ತಿಳಿಸಿದರು.
ನೆಹರು, ಇಂದಿಗಾಗಾಂಧಿ, ರಾಜೀವ್‌ಗಾಂಧಿ ಕಾಲದಿಂದಲೂ ಬಾಹ್ಯಕಾಶಕ್ಕೆ ಒತ್ತು ನೀಡುತ್ತಾ ಬರಲಾಗುತ್ತಿದೆ. ಅದರ ಪರಿಣಾಮ ಇಂದಿನ ಚಂದ್ರಯಾನ-3 ಯಶಸ್ವಿಯಾಗಿದೆ. ಹಾಗಾಗಿ ಇದರ ಸಂಪೂರ್ಣ ಯಶಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕೆ ವಿನಾ, ಪಕ್ಷಕ್ಕೆ ಅಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ರಾಜ್ಯದ ಜನರೇ ಈಗಾಗಲೇ ಬಿಜೆಪಿಗರನ್ನು ಸೋಲಿಸಿ ಬೀದಿಗೆ ನಿಲ್ಲಿಸಿದ್ದಾರೆ. ಅವರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕರನ್ನು ಮೋದಿ ಬೀದಿಯಲ್ಲಿ ನಿಲ್ಲಿಸಿದರು ಎಂಬ ಪಕ್ಷದ ಟ್ವೀಟ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದರೂ ಅವರು ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಗೆಲುವು ಬಿಜೆಪಿಗೆ ಮೈ ಪರಚಿಕೊಂಡಂತೆ ಆಗಿದೆ. ಯಾರು ಯಾರಿಗೆ ಕರೆ ಮಾಡಿದರು ಮಾತನಾಡಿದರು ಅನ್ನುವುದು ನಮ್ಮ ಆದ್ಯತೆ ಅಲ್ಲ. ಯಾರು ಯಾರಿಗೆ ಬೇಕಾದರೂ ಮಾತನಾಡಲಿ. ನಮ್ಮ ಸರ್ಕಾರ ಭದ್ರವಾಗಿದೆ ಯಾರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net