

ನುಗ್ಗೇಹಳ್ಳಿ: ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್ ಗೌಡ ತಿಳಿಸಿದರು.
ವೀರಶೈವ ಲಿಂಗಾಯತ ಭವನದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಯೋಜಿಸಿದ್ದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 79,293 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಿಂದ 15 ಕೋಟಿ ರೂ. ಹಣ ಬರುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ಪ್ರಸಿದ್ಧ ದೇವಾಲಯಗಳಿಗೆ ಬಸ್‌ನಲ್ಲಿ ಪ್ರಯಾಣ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೂ ಹೆಚ್ಚು ಮಹಿಳೆಯರು ಬಂದು ಹೋಗುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಮಾತನಾಡಿ, ತಾಲೂಕಿನ 1,139 ಪದವೀಧರರಿಗೆ ಯುವನಿಧಿಯಿಂದ 34 ಲಕ್ಷ ರೂ.ಹಣ ಬರುತ್ತಿದೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಸ್.ಇಂದಿರಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಪ್ಪಲು ಮಂಜುನಾಥ್, ಆಹಾರ ಇಲಾಖೆ ಸಿರಸ್ತೇದಾರ್ ಹೇಮಂತ್, ಕೆಎಸ್‌ಆರ್‌ಟಿಸಿ ಇನ್‌ಸ್ಪೆಕ್ಟರ್ ಮಲ್ಲೇಶ್, ಎಸ್‌ಒ ರಂಗೇಗೌಡ, ಗಿರೀಶ್, ಪಿಡಿಒ ಶಿವರಾಂ, ಜ್ಯೋತಿ, ಗಂಗಾಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ರಮ್ಯಾ, ಗೌಡಾಕಿ ಮಂಜುನಾಥ್, ನಟರಾಜ್ ಯಾದವ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರಾದ ನಾಗೇಶ್, ಕೆಂಪೇಗೌಡ, ರಂಗಸ್ವಾಮಿ, ನಿಶ್ಚಲ್ ಹೈಜಾಕ್, ನವೀನ್ ಕುಮಾರ್, ಜನಾರ್ದನ್, ಗಣೇಶ್, ರಂಗಸ್ವಾಮಿ, ಸಿ.ಬಿ.ಮಂಜುನಾಥ್, ಪ್ರಕಾಶ್, ಕೆ.ಎನ್.ನಾಗೇಶ್ ಹಾಜರಿದ್ದರು.