ಗೌರವಾಧ್ಯಕ್ಷರಾಗಿ ಶ್ರೀ ಬಸವ ಮರಳಸಿದ್ಧ ಸ್ವಾಮೀಜಿ ಹಾಗೂ ಶ್ರೀ ಚಂದ್ರಶೇಖರ ಸ್ವಾಮೀಜಿ ಆಯ್ಕೆ

25 ckm 3
ಚಿಕ್ಕಮಗಳೂರಿನ ಬಸವತತ್ವ ಪೀಠದಲ್ಲಿ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಹಾಗೂ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಕೆ.ಸಿ.ನಿಶಾಂತ್, ನಾಗೇಶ್, ಹೇಮಲತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಗೌರವಾಧ್ಯಕ್ಷರಾಗಿ ಬಸವಮಂದಿರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹಾಗೂ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬುಧವಾರ ಬಸವತತ್ವ ಮಠದಲ್ಲಿ ಆಯ್ಕೆ ಮಾಡಲಾಯಿತು.

ಇದೇ ವೇಳೆ ಸದಸ್ಯತ್ವ ಅಭಿಯಾನಕ್ಕೆ ಸ್ವಾಮೀಜಿಗಳು ಚಾಲನೆ ನೀಡಿದರು. ಸಂಘಕ್ಕೆ ನೂತನ ಮಹಿಳಾ ನಿರ್ದೇಶಕರಾಗಿ ಎಂ.ಬಿ.ಮೋಹನಕುಮಾರಿ, ನಳೀನಾ, ರುಕ್ಮೀಣಿ, ಪ್ರಮೀಳಾ, ಮೋಹನಕುಮಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಘದ ಕೆ.ಸಿ.ನಿಶಾಂತ್, ಉಪಾಧ್ಯಕ್ಷರಾಗಿ ನಾಗೇಶ್, ಹೇಮಾಲತ, ಕಾರ್ಯದರ್ಶಿ ಕೀರ್ತಿ, ಸಹ ಕಾರ್ಯದರ್ಶಿ ದರ್ಶನ್, ನಿರ್ದೇಶಕ ಶಿವಕೀರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net