ಗುಜರಾತಿನ ಅದ್ರಿ ಬೀಚ್‌ನಲ್ಲಿ ೩೦ ಕಿ.ಮೀ ಸಮುದ್ರದಲ್ಲಿ ಈಜಿ ಪ್ರಥಮ ಸ್ಥಾನ ಪಡೆದ ಕೋಲಾರದ ಡಿಂಪಲ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ೧೪ ವರ್ಷದ ಬಾಲಕಿಯೊಬ್ಬಳು ಗುಜರಾತಿನ ಅದ್ರಿ ಬೀಚಿನಿಂದ ವೀರವಾಲ್ ಜೆಟ್ಟಿ ವರೆಗೆ ೩೦ ಕಿ.ಮೀ ಸಮುದ್ರದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ದಾಖಲೆಯ ಸಮಯದೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಶ್ರೀನಿವಾಸಪುರ ತಾಲ್ಲೂಕು ಕುಪ್ಪಹಳ್ಳಿ ಗ್ರಾಮದ ಶಿಕ್ಷಕರಾದ ಮಂಜುನಾಥ್ ಮತ್ತು ರೂಪ ದಂಪತಿಗಳ ೧೪ ವರ್ಷದ ಪುತ್ರಿ ಡಿಂಪಲ್ ಸೋನಾಕ್ಷಿ ಎಂ.ಗೌಡ ಈಕೆ ರಾಷ್ಟç ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳೊಂದಿಗೆ ದಾಖಲೆಯನ್ನು ಸಾಧಿಸಿದ್ದಾಳೆ.

ಪ್ರಸ್ತುತ ಡಿಂಪಲ್ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ೩ ವರ್ಷದಿಂದಲೇ ತಂದೆ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಈಜು ಕಲೆತು ರಾಜ್ಯ ಅಲ್ಲದ ಹೊರ ರಾಜ್ಯಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹಾಂಕ್‌ಕಾAಗ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಶಿಫ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ೧೦ ಕಿ.ಮೀ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತು ವಿಜಯ ದುರ್ಗದಲ್ಲಿ ನಡೆದ ೧೫ ಕಿ.ಮೀ ಈಜು ಸ್ಪರ್ಧೆಯಲ್ಲಿ ಮತ್ತು ಮಾಲ್ವನ್ ಬೀಚಿನಲ್ಲಿ ನಡೆದ ೫ ಕಿ.ಮೀ. ಹಾಗೂ ೧೦ ಕಿ.ಮೀ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಗುಜರಾತ್ ನ ಪೋರಬಂದರ್ನಲ್ಲಿ ನಡೆದ ಐದು ಕಿಲೋಮೀಟರ್ ಮತ್ತು ೧೦ ಕಿ.ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಡಿಂಪಲ್ ರವರು ವಿಶ್ವ ಚಾಂಪಿಯನ್ ಶಿಪ್ ಮತ್ತು ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತರುವ ಗುರಿಯೊಂದಿಗೆ ಬೆಂಗಳೂರಿನ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಗುರುಗಳಾದ ಶ್ರೀಯುತ ನಿಹಾರ್ ಅಮೀನ್ ರವರ ಡಾಲ್ಫಿನ್ ಅಕಾಡೆಮಿಯಲ್ಲಿ ದಿನನಿತ್ಯ ಆರು ಗಂಟೆ ಈಜು ಅಭ್ಯಾಸ ಮುಂದುವರೆಸಿರುತ್ತಾರೆ.

ಡಿಂಪಲ್ ಸೋನಾಕ್ಷಿ ಎಂ ಗೌಡ ರವರ ಕಠಿಣ ಪರಿಶ್ರಮ ಹಾಗೂ ಅವರ ಪೋಷಕರ ಸಮಗ್ರ ಸಹಕಾರದ ಫಲವು ಅವರ ಎಲ್ಲಾ ಕನಸುಗಳು ಈಡೇರಲಿ ನಮ್ಮ ದೇಶದ ಒಲಂಪಿಕ್ ಪದಕಗಳ ಪಟ್ಟಿಯಲ್ಲಿ ನಮ್ಮ ಜಿಲ್ಲೆಯು ಸೇರುವಂತಾಗಲಿ ಎಂದು ಸಮಾಜ ಸೇವಕ ಬಗಳಹಳ್ಳಿ ಸುರೇಶ್ ಬಾಬು ಹಾರೈಸಿದ್ದಾರೆ.

ಚಿತ್ರ ೨೫ ಕೆ.ಎಲ್.ಆರ್. ೦೪ : ಡಿಂಪಲ್ ಸೋನಾಕ್ಷಿ ಎಂ.ಗೌಡ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net