ಖರ್ಗೆ ಸರ್ವಾಧಿಕಾರ ಖಂಡಿಸಿ ಬಿಜೆಪಿಯಿಂದ ಕಲಬುರಗಿ ಚಲೋ 24ರಂದು

2305KLB08
Published on

ಕಲಬುರಗಿ: ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದಲ್ಲಿ ಕಾಂಗ್ರೆಸ್​ ಕರ‍್ಯರ‍್ತರು, ರಾಜಕೀಯ ಪ್ರೇರಿತ ಪೊಲೀಸರು ಕಾನೂನು ಬಾಹಿರವಾಗಿ ದಿಗ್ಬಂಧನ ಹಾಕಿದ್ದು ಖಂಡಿಸಿ ಕಲಬುರಗಿಯಲ್ಲಿ ಶನಿವಾರ ಬಿಜೆಪಿಯಿಂದ ರಾಜ್ಯಮಟ್ಟದ ಬೃಹತ್​ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್​ ಮುಖ್ಯ ಸಚೇತಕ ಎನ್​.ರವಿಕುಮಾರ ತಿಳಿಸಿದರು.

ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ಟನೆ ಚಿತ್ತಾಪುರದಲ್ಲಿ ನಡೆದಿದೆ. ಅಂಬೇಡ್ಕರ್​ ಪುಸ್ತಕ ಹಿಡಿದು, ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರ ಗುಂಡಾಗಿರಿ ವಿರುದ್ಧ ಶನಿವಾರ ಬೆಳಗ್ಗೆ ೧೦.೩೦ಕ್ಕೆ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್​.ಅಶೋಕ, ಗೋವಿಂದ ಕಾರಜೋಳ, ಸಿಟಿ ರವಿ ಸೇರಿ ರಾಜ್ಯದ ಎಲ್ಲ ನಾಯಕರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇಡಿಕೆಗಳು: ಮುಖ್ಯಮಂತ್ರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿದ್ದರೆ, ಪ್ರತಿಪಕ್ಷದ ನಾಯಕ ಬೇಕಿದ್ದರೆ ಕೂಡಲೇ ಪ್ರಿಯಾಂಕ್​ ರ‍್ಖಗೆಯ ರ‍್ವಾಧಿಕಾರಕ್ಕೆ ತಡೆ ಹಾಕಬೇಕು. ಪ್ರಿಯಾಂಕ್​ ರ‍್ಖಗೆರನ್ನು ಸಂಪುಟದಿಂದ ಕಿತ್ತು ಹಾಕಬೇಕು, ರಾಜಕಾರಣಿಗಳ ಅಣತಿಯಂತೆ ಕುಣಿದ ಎಎಸ್​ಪಿ, ಎಸ್​ಐ, ಡಿವೈಎಸ್​ಪಿಯನ್ನು ಕೂಡಲೇ ಅಮಾನತು ಮಾಡಬೇಕು, ಬಿಜೆಪಿ ಮುಖಂಡರ ವಿರುದ್ಧ ಹಾಕಿರುವ ಕೇಸ್​ ವಾಪಸ್​ ಪಡೆಯಬೇಕು, ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಿರುಕುಳ ನೀಡಿದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೇಳಿದರು.

ಛಲವಾದಿ ಅವರನ್ನು ಕೂಡಿ ಹಾಕಿದ ವೇಳೆ ಪ್ರಿಯಾಂಕ್​ ರ‍್ಖಗೆ ಅವರಿಂದ ಯರ‍್ಯಾರಿಗೆ ೋನ್​ ಬಂದಿವೆ ಎಂಬ ನ್ಯಾಯಾಂಗ ತನಿಖೆ ಆಗಬೇಕು. ಜಿಲ್ಲಾಧಿಕಾರಿ ಸೇರಿ ಎಲ್ಲರೂ ಸಚಿವ ರ‍್ಖಗೆ ಕೈಗೊಂಬೆಯಂತೆ ರ‍್ತಿಸುತ್ತಿದ್ದು, ಇವರ ಈ ಕೆಲಸ ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಖಗೆ ಅವರಿಗೆ ಶೋಭೆ ತರುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.

ಶಾಸಕರಾದ ಡಾ.ಬಿ.ಜಿ.ಪಾಟೀಲ್​, ಬಸವರಾಜ ಮತ್ತಿಮಡು, ಶಶೀಲ ನಮೋಶ, ಡಾ.ಅವಿನಾಶ ಜಾಧವ್​, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಎಸ್ಸಿ ಮರ‍್ಚಾ ರಾಜ್ಯಾಧ್ಯಕ್ಷ ಮಹೇಂದ್ರ ಕೌತಾಳ, ಪ್ರಮುಖರಾದ ದತ್ತಾತ್ರೇಯ ಪಾಟೀಲ್​ ರೇವೂರ, ಸುಭಾಷ ಗುತ್ತೇದಾರ್​, ಅಮರನಾಥ ಪಾಟೀಲ್​, ಶಿವರಾಜ ಪಾಟೀಲ್​ ರದ್ದೇವಾಡಗಿ, ನಿತಿನ್​ ಗುತ್ತೇದಾರ್​, ಅವ್ವಣ್ಣ ಮ್ಯಾಕೇರಿ, ಉಮೇಶ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net