ಕೋಲಾರ ಗ್ರಾಮಾಂತರ ಪೋಲಿಸರಿಂದ ಭಾರಿ ವಾಹನ ಆರೋಪಿ ಬಂಧನ ವಾಹನಗಳ ವಶ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ವಾಹನಗಳ ಕಳುವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಕೋಲಾರ ಗ್ರಾಮಾಂತರ ಪೋಲಿಸರು ಬಂಧಿತನಿAದ ೫ ಲಕ್ಷ ಬೆಲೆ ಬಾಳುವ ಬುಲೆರೋ ವಾಹನ ಮತ್ತು ೧೧ ಲಕ್ಷ ಬೆಲೆ ಬಾಳುವ ಈಚೆರ್ ವಾಹನವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದ ಪೆರುಮಾಳ್ ಎಂಬುರಿಗೆ ಸೇರಿದ ಬುಲೆರೋ ಪಿಕಪ್ ವಾಹನವನ್ನು ತಮಿಳು ನಾಡಿನ ಸೇಲಂ ಜಿಲ್ಲೆಯ ಕಂದಸ್ವಾಮಿ (೫೦) ಎಂಬುವವರು ಅಪಹರಿಸಿದ್ದರು.

ಅದೇ ರೀತಿ ಕಳೆದ ತಿಂಗಳು ೧೨ ರಂದು ರಾತ್ರಿ ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸೈಯದ್ ಅರಬ್ ಜಾನ್ ಎಂಬುವವರಿಗೆ ಸೇರಿದ ೧೧ ಲಕ್ಷ ಬೆಲೆಬಾಳುವ ಈಚರ್ ವಾಹನವನ್ನು ಇದೇ ಕಂದಸ್ವಾಮಿ ಕಳವು ಮಾಡಿದ್ದ. ವಾಹನ ಮಾಲೀಕರು ನೀಡಿದ್ದ ದೂರನ್ನು ಆಧರಿಸಿ ಗಲ್‌ಪೇಟೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ.ಎಂ.ನಾರಾಯಣ ರವರ ಆದೇಶದಂತೆ ಅಪರ ಪೊಲೀಸ್ ಅಧೀಕ್ಷಕರು ಹೆಚ್.ಸಿ.ಜಗಧೀಶ್ ಹಾಗೂ ಕೋಲಾರ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕರವರಾದ ಡಿ.ಸಿ ನಂದಕುಮಾರ್, ಸಿಪಿಐ ವೆಂಕಟರವಣಪ್ಪ, ಪಿ.ಎಸ್.ಐ. ಕೆ.ನಾರಾಯಣಸ್ವಾಮಿ, ಸಿಬ್ಬಂದಿಯಾದ ಮುರಳಿ, ಶೇಕ್ ಸಾಧಿಕ್ ಪಾಷ, ಸಧಾಶಿವಯ್ಯ, ಕೃಷ್ಣಗೌಡ, ಅರುಣ್ ಕುಮಾರ್ ತಂಡ ತಮಿಳುನಾಡಿನ ಸೇಲಂ ನಲ್ಲಿ ಕಳುವಾದ ಈಚೆರ್ ಮತ್ತು ಬುಲೆರೋ ಪಿಕಪ್ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿತ್ರ ೨೬ ಕೆ.ಎಲ್.ಆರ್. ೦೯ : ಕೋಲಾರದ ಗಲ್‌ಪೇಟೆ ಪೋಲಿಸರಿಂದ ವಾಹನ ಕಳುವು ಆರೋಪಿಯನ್ನು ಬಂಧಿಸಿ ಅವರಿಂದ ವಾಹನಗಳನ್ನು ವಶಪಡಿಸಿಕೊಂಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net