ವಿಜಯವಾಣಿ ಸುದ್ದಿಜಾಲ ಕೋಲಾರ
ನಾಡಿನಾದ್ಯಂತ ಸೋಮವಾರದಿಂದ ನವರಾತ್ರಿ ಪ್ರಯುಕ್ತ ಶಕ್ತಿ ದೇವತೆ ಆರಾಧನೆ ಪ್ರಾರಂಭವಾಗಿದ್ದು, ಕೋಲಾರ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಪ್ರಪ್ರಥಮ ಬಾರಿಗೆ ಕೋಲಾರಮ್ಮ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಮ್ಮ ದೇವಾಲಯಕ್ಕೆ ಬರುವ ಭಕ್ತಾಧಿಗಳು ಇನ್ನು ಮುಂದೆ ಲಡ್ಡು ಪ್ರಸಾದ ಸ್ವೀಕರಿಸಬಹುದಾಗಿದೆ. ನಗರದ ಪ್ರಮುಖ ಮತ್ತೊಂದು ದೇವಾಲಯ ಸೋಮೇಶ್ವರ ದೇವಾಲಯ ಹಾಗೂ ಕೋಲಾರ ತಾಲೂಕಿನ ಸೀತಿ ಭೈರವೇಶ್ವರ ದೇವಾಲಯದಲ್ಲೂ ಸಹ ಲಡ್ಡು ಪ್ರಸಾದ ವಿತರಣೆ ಕಾರ್ಯ ಪ್ರಾರಂಭ ಮಾಡಲಾಗಿದೆ. ಈ ಸೌಲಭ್ಯವನ್ನು ಭಕ್ತಾಧಿಗಳು ಪಡೆಯಬಹುದಾಗಿದೆ ಎಂದರು.
ಚಿತ್ರ ೨೨ ಕೆ.ಎಲ್.ಆರ್. ೦೫ : ನವರಾತ್ರಿ ಪ್ರಯುಕ್ತ ಕೋಲಾರಮ್ಮ ದೇವರ ದರ್ಶನ ಪಡೆದ ಜಿಲ್ಲಾಧಿಕಾರಿ ಎಂ.ಆರ್.ರವಿ