ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರದ ನರಸಾಪುರ, ವೇಮ್ಗಲ್ ಕೈಗಾರಿಕಾ ಪ್ರಾಂಗಣದಲ್ಲಿ ತಲೆ ಎತ್ತಿರುವ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ, ಕಾರ್ಮಿಕರ ಮಧ್ಯೆ ಘರ್ಷಣೆ, ಸಾರಿಗೆ ಸೌಲಭ್ಯವಿಲ್ಲದೇ ಮೂಲಭೂತ ಸೌಲಭ್ಯಗಳಿಂದ ವಂಚಿತಗೊAಡಿರುವ ಆರೋಪಗಳು ಕೇಳಿಬಂದಿವೆ.
ನರಸಾಪುರ ಮತ್ತು ವೇಮಗಲ್ ಸುತ್ತಮುತ್ತ ತಲೆ ಎತ್ತಿರುವ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವಿಷೇಶವಾಗಿ ಮಹಿಳಾ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಕೆಲವು ಕಾರ್ಖಾನೆಗಳಿಂದ ಕೆಲಸ ಮುಗಿಸಿ ಹೊರ ಹೋಗುವವರಿಗೆ ಕಂಪನಿಯವರೇ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಸಣ್ಣ ಸಣ್ಣ ಕಾರ್ಖಾನೆಯವರು ಸಾರಿಗೆ ಸೌಲಭ್ಯ ಕಲ್ಪಿಸಿದೆ ಇರುವುದರಿಂದ ಮಹಿಳಾ ಕಾರ್ಮಿಕರು ಕೆಲಸ ಮುಗಿಸಿ ಮನೆ ಸೇರಿಕೊಳ್ಳಲು ಭದ್ರತೆ ವ್ಯವಸ್ಥೆ ಇಲ್ಲದಂತೆ ಆಗಿದೆ.
ಕೈಗಾರಿಕಾ ಪ್ರಾಂಗಣದಲ್ಲ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಖಾಸಗಿ ಟೆಂಪೋ, ಟ್ಯಾಕ್ಸಿ, ಆಟೋಗಳ ಅವಲಂಭನೆಯೇ ಆಗಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಮತ್ತು ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಟೆಂಪೋ ಮತ್ತು ಟ್ಯಾಕ್ಸಿಯವರು ಕಾರ್ಮಿಕರನ್ನು ಬೇರೆ ಬೇರೆ ಆಯಾಗಳಲ್ಲಿ ಬಳಸಿಕೊಳ್ಳುವ ಪರಿಸ್ಥಿತಿ ಇದೆ ಎಂದು ಕಾರ್ಮಿಕರ ಅಳಲಾಗಿದೆ.
ಉತ್ತರ ಭಾರತದಿಂದ ಅನೇಕ ಮಹಿಳೆಯರು ಕೆಲಸ ಹುಡುಕಿ ಕಾರ್ಖಾನೆಗಳಿಗೆ ಬಂದಿದ್ದಾರೆ. ಅವರಿಗೆ ಭಾಷೆ ಅಡ್ಡಿಯಾಗಿದೆ. ಕೊಡುವ ಸಂಬಳವೂ ಕಡಿಮೆ ಇರುವುದರಿಂದ ವಸತಿ ಸೌಲಭ್ಯಕ್ಕೂ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ಕೆಲವು ಸ್ಥಳೀಯರು ಬಂಡವಾಳ ಮಾಡಿಕೊಂಡು ವಲಸೆ ಕಾರ್ಮಿಕರಿಗೆ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಾರ್ಮಿಕರ ಘರ್ಷಣೆ :
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಧ್ಯೆ ಇತ್ತೀಚೆಗೆ ಘರ್ಷಣೆಗಳು ಹೆಚ್ಚಾಗಿವೆ. ಶ್ರೀನಿವಾಸಪುರದ ಮ್ಯಾಂಗೋ ಜ್ಯೂಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಕಾರ್ಮಿಕ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಶನಿವಾರ ಮೃತಪಟ್ಟಿದ್ದಾನೆ. ನರಸಾಪುರದ ಬಳಿ ಇರುವ ಪ್ರಕಾಶ್ ಬಾಡಿಬಿಲ್ಡರ್ ಕಂಪನಿಯಲ್ಲಿ ಬಸ್ಸಿನ ಮೇಲಿಂದ ಕಾರ್ಮಿಕ ಬಿದ್ದು, ಮೃತಪಟ್ಟಿದ್ದಾನೆ. ಹೀಗೆ ಹಲವಾರು ಕಾರ್ಖಾನೆಗಳಲ್ಲಿ ಕಾರ್ಮಿಕರ ಮಧ್ಯೆ ಘರ್ಷಣೆಗಳು ನಡೆದು ಗಾಯಗೊಂಡು ಆಸ್ಪತ್ರೆ ಸೇರಿರುವವರು ಮತ್ತು ಮೃತಪಟ್ಟಿರುವವರು ಇದ್ದಾರೆ. ಅವರನ್ನು ಆಯಾ ಕಾರ್ಮಿಕರ ರಾಜ್ಯಗಳಿಗೆ ಸದ್ದುಗದ್ದಲವಿಲ್ಲದೆ ಕಾರ್ಖಾನೆಯ ವ್ಯವಸ್ಥಾಪಕರು ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಪೋಲಿಸರಿಗೂ ಮಾಹಿತಿ ಇಲ್ಲದಂತೆ ರವಾನಿಸಿದ್ದಾರೆ ಎಂದು ಕಾರ್ಮಿಕರೇ ಬಾಯಿ ಬಿಡುತ್ತಿದ್ದಾರೆ. ಬಹಿರಂಗವಾಗಿ ದೂರು ನೀಡಿದರೆ ನನ್ನ ಕೆಲಸವೂ ಹೋಗುತ್ತದೆಂದು ಕಾರ್ಮಿಕರೇ ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ.
ಕೋಟ್
ಪ್ರಕಾಶ್ ಬಾಡಿಬಿಲ್ಡರ್ ಕಂಪನಿಯಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಕಂಪನಿ ಬಗ್ಗೆ ದೂರು ದಾಖಲಾಗಿದೆ. ಇತರೆ ಕಾರ್ಖಾನೆಗಳಲ್ಲಿ ಸಂಘರ್ಷದಿAದ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ನಮಗೆ ವರದಿ ಬಂದಿಲ್ಲ. ಕಾರ್ಖಾನೆಗಳಲ್ಲಿ ಭದ್ರತೆ ಒದಗಿಸುವುದು, ಸ್ವಚ್ಛತೆ, ಪಿ.ಎಫ್ ಮತ್ತು ಇ.ಎಫ್. ಸೇರಿದಂತೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಒಗದಿಸುವುದು ನಮ್ಮ ಇಲಾಖೆಗೆ ಬರುತ್ತದೆ. ಕಾರ್ಖಾನೆಯಿಂದ ಹೊರಗೆ ಘರ್ಷಣೆಯಾದರೆ ಅದು ಪೋಲಿಸ್ ಇಲಾಖೆಗೆ ಬರುತ್ತದೆ. ಸಾರಿಗೆ ವ್ಯವಸ್ಥೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಇದೆ. ಸಣ್ಣ ಕಾರ್ಖಾನೆಗಳಲ್ಲಿ ಸಾರಿಗೆ ಭ್ಯತ್ಯೆ ನೀಡುತ್ತಿದೆ. ಸಾರಿಗೆ ವ್ಯವಸ್ಥೆ ಅವರೇ ಮಾಡಿಕೊಡಬೇಕಾಗುತ್ತದೆ. ಕಾರ್ಖಾನೆಗಳಲ್ಲಿ ಕಾರ್ಮಿಕರ ಘರ್ಷಣೆ ಸೇರಿದಂತೆ ಬೇರೆ ಅವ್ಯವಹಾರಗಳು ನಡೆದರೆ ನಮ್ಮ ಗಮನಕ್ಕೆ ಕಾರ್ಮಿಕರು ತರಬೇಕು. ಇನ್ನು ಮುಂದೆ ಈ ಬಗ್ಗೆ ನಿಗಾ ವಹಿಸಲಾಗುವುದು.
-ನರಸಿಂಹಮೂರ್ತಿ, ಕಾರ್ಖಾನೆ ಮತ್ತು ಬಾಯ್ರ್ಸ್ ಸ್ವಾಸ್ತö್ಯ ಇಲಾಖೆಯ ಅಧಿಕಾರಿ.
ಕೋಟ್
ಕಾರ್ಮಿಕರ ಸಂಬಳದಲ್ಲಿ ವ್ಯತ್ಯಾಸ ಮತ್ತು ಕಡಿಮೆ ನೀಡುವುದು ಕಂಡು ಬಂದರೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡಿದರೆ ಕಾರ್ಮಿಕರು ಇಲಾಖೆಯ ಗಮನಕ್ಕೆ ತರಬೇಕು. ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಇತರೆ ಸಮಸ್ಯೆಗಳಿಗೆ ಸಂಬAಧಪಟ್ಟ ಇಲಾಖೆಗಳು ಇವೆ. ಅವರ ಬಳಿ ಕಾರ್ಮಿಕರು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಆದರೂ ಸಹ ನಮ್ಮ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲಾಗುವುದು.
-ವರಲಕ್ಷಿö್ಮ, ಜಿಲ್ಲಾ ಕಾರ್ಮಿಕಾಧಿಕಾರಿ, ಕೋಲಾರ.
ಕೋಟ್
ಕಾರ್ಮಿಕರ ಮಧ್ಯೆ ಘರ್ಷಣೆ ಹಾಗೂ ಸ್ಥಳೀಯರ ಕಿರುಕುಳದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ರಾತ್ರಿ ಪಾಳಯದಲ್ಲಿ ಸಾರಿಗೆ ವ್ಯವಸ್ಥೆ, ಭದ್ರತೆ ಬಗ್ಗೆ ಪರಿಶೀಲಿಸಲಾಗುವುದು. ನಾನು ಬಂದು ಒಂದು ತಿಂಗಳಾಗಿದೆ. ಕೈಗಾರಿಕಾ ಪ್ರಾಂಗಣದಲ್ಲಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು.
-ಬಿ.ಪಿ.ಮಂಜುನಾಥ್, ವೃತ್ತ ನಿರೀಕ್ಷಕರು, ವೇಮಗಲ್ ಪೋಲಿಸ್ ಠಾಣೆ.
ಚಿತ್ರ ೨೪ ಕೆ.ಎಲ್.ಆರ್. ೦೪ : ನರಸಾಪುರ ಕೈಗಾರಿಕಾ ಪ್ರಾಂಗಣ