ಕೋಲಾರದ ಎಂ.ಸ್ಪೂರ್ತಿ ಕಂಪನಿ ಕಾರ್ಯದರ್ಶಿಗಳ ವೃತ್ತಿಪರ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ೭ನೇ ರ‍್ಯಾಂಕ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದ ಕುಮಾರಿ ಎಂ.ಸ್ಪೂರ್ತಿ ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ ನಡೆಸುವ ಕಂಪನಿ ಕಾರ್ಯದರ್ಶಿಗಳ ವೃತ್ತಿಪರ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಏಳನೇ ರಾಂಕ್ ಗಳಿಸಿ ಕೋಲಾರ ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಈ ಸಾಧನೆ ಮೆರೆದಿರುವ ಎಂ.ಸ್ಪೂರ್ತಿ ಜಿಲ್ಲೆಯಲ್ಲಿ ಮೊದಲಿಗರಾಗಿದ್ದಾರೆ. ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಮುರಳೀಧರ್ ಮತ್ತು ಶ್ರೀಮತಿ ಎಸ್.ಎನ್.ವಾಣಿಶ್ರೀ ದಂಪತಿಗಳ ಪುತ್ರಿಯಾಗಿರುವ ಎಂ.ಸ್ಪೂರ್ತಿ ರವರನ್ನು ಕೋಲಾರದ ಶೈಕ್ಷಣಿಕ ಮತ್ತು ವೃತ್ತಿಪರ ಕಂಪೆನಿ ಕಾರ್ಯದರ್ಶಿಗಳು ಅಭಿನಂದಿಸಿದ್ದಾರೆ.

ಚಿತ್ರ ೨೫ ಕೆ.ಎಲ್.ಆರ್. ೦೧ : ಎಂ.ಸ್ಪೂರ್ತಿ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net