ಕೆರೆಗೆ ನೀರು ತುಂಬಿಸಲು ರೈತರು ಸಹಕಾರ ಅಗತ್ಯ

Untitled design (3)
ಸಿರಗುಪ್ಪ ನಗರದ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ಕೆರೆಗೆ ನೀರು ತುಂಬಿಸಲು ಆಯೋಜಿಸಿದ್ದ್ದ ಸಭೆಯಲ್ಲಿ ತಾಪಂ ಇಒ ಪವನ್‌ಕುಮಾರ್ ಮಾತನಾಡಿದರು. ತಹಸೀಲ್ದಾರ್ ಎಚ್.ವಿಶ್ವನಾಥ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವಿಂದ್ರನಾಯ್ಕ ಇದ್ದರು.
Published on

ಸಿರಗುಪ್ಪ:ಈಗಾಗಲೇ ಎಲ್‌ಎಲ್‌ಸಿ ಕಾಲುವೆಗೆ ತುಂಗಭದ್ರಾ ನದಿಯಿಂದ ನೀರುಹರಿಸಲಾಗಿದ್ದು, ಕುಡಿವ ನೀರಿನ ಕೆರೆಗಳಿಗೆ ನೀರು ತುಂಬಿಸಲು ರೈತರು ಸಹಕರಿಸಬೇಕು ಎಂದು ತಹಸೀಲ್ದಾರ್ ಎಚ್.ವಿಶ್ವನಾಥ ಹೇಳಿದರು.


ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುಡಿವ ನೀರಿನ ಕೆರೆಗೆ ನೀರು ತುಂಬಿಸಲು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಪಂ, ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.


ತಾಲೂಕಿನಲ್ಲಿ ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಗೆ ಬರುವ 26 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕು.

ಕುಡಿವ ನೀರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಕೆಲವು ಕಡೆ ಪೊಲೀಸ್ ಸಿಬ್ಬಂದಿ ನೇಮಿಸಿ ಕೆರೆಗಳಿಗೆ ನೀರನ್ನು ತುಂಬಿಸಲಾಗುವುದು. ಗ್ರಾಪಂ ಅಧಿಕಾರಿಗಳು ಪೊಲೀಸರ ನೆರವು ಬೇಕಿದ್ದರೆ ತಾಲೂಕು ಕಚೇರಿ ಅಥವಾ ಸಂಬಂಧಿಸಿದ ಪೊಲೀಸ್ ಠಾಣೆಗೆ ಪತ್ರದ ಮೂಲಕ ತಿಳಿಸಿದರೆ ಪೊಲೀಸರು ಬಂದೋಬಸ್ತ್ ಒದಗಿಸುತ್ತಾರೆ ಎಂದರು.


ಕುಡಿವ ನೀರಿನ ಕೆರೆ ತುಂಬಿಸಲು ಅಧಿಕಾರಿಗಳು ನಿರ್ಲಕ್ಷೃ ಮಾಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಕೆರೆಗೆ ನೀರು ತುಂಬಿಸುವಂತೆ ಆದೇಶ ನೀಡಿದ್ದಾರೆ.

ಎಲ್ಲರೂ ಆದೇಶ ಪಾಲನೆ ಮಾಡಿ ಕೆರೆಗಳನ್ನು ಭರ್ತಿಮಾಡಬೇಕೆಂದು ಸೂಚಿಸಿದರು. ತಾಪಂ ಇಒ ಪವನ್ ಕುಮಾರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವಿಂದ್ರನಾಯ್ಕ ಮಾತನಾಡಿದರು. ವಿವಿಧ ಗ್ರಾಪಂ ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net