More

    ಕಲಬುರಗಿಯಲ್ಲಿ ಐದು ಪಾಸಿಟಿವ್ ಪ್ರಕರಣ

    ಕಲಬುರಗಿ: ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ ಮರಳಿರುವ ಜಿಲ್ಲೆಯ ಐದು ಜನರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 190 ಏರಿಕೆಯಾಗಿದೆ.
    ಸೇಡಂ ತಾಲೂಕಿನ ಮೇದಕ್ ಗ್ರಾಮದ 30 ವರ್ಷದ ಮಹಿಳೆ (ಪಿ-2422), ಶಹಾಬಾದ್ ತಾಲೂಕಿನ ಭಂಕೂರ ಬಳಿಯ ತರಿ ತಾಂಡಾದ 30 ವರ್ಷದ ಮಹಿಳೆ (ಪಿ-2492) ಹಾಗೂ ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 9 ವರ್ಷದ ಬಾಲಕನಿಗೆ (ಪಿ-2493) ಕೋವಿಡ್-19 ದೃಢವಾಗಿದೆ.
    ಅಫಜಲಪೂರ ತಾಲೂಕಿನ 4 ವರ್ಷದ ಬಾಲಕ ಮತ್ತು 25 ವರ್ಷದ ಯುವತಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ತಾಲೂಕಿನ ಶಿರವಾಳ ಗ್ರಾಮದ 25 ವರ್ಷದ ಮಹಿಳೆ (ಪಿ-2520) ಮತ್ತು ನಂದಗರ್ಾ ಗ್ರಾಮದ 4 ವರ್ಷದ ಗಂಡು ಮಗುವಿಗೆ (ಪಿ-2521) ಕೋವಿಡ್-19 ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 190ಕ್ಕೆ ಹೆಚ್ಚಳವಾಗಿದ್ದು, 108 ಪ್ರಕರಣ ಸಕ್ರೀಯವಾಗಿವೆ.
    ಈ ಸೋಂಕಿತರೆಲ್ಲ ಸರ್ಕಾ ರಿ ಕ್ವಾರಂಟೈನ್ನಲ್ಲಿ ಇದ್ದವರಾಗಿದ್ದು, ಸೋಂಕು ಪತ್ತೆ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 190ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿದ್ದರೆ, 7 ಜನ ನಿಧನ ಹೊಂದಿದ್ದಾರೆ. 108 ಜನರಿಗೆ ಐಸೋಲೇಶನ್ ವಾಡರ್್ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts