ಓದುವ ಹವ್ಯಾಸದಿಂದ ಜ್ಞಾನ ವೃದ್ಧಿ

Sanmana
Published on

ಚಿತ್ರದುರ್ಗ: ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸಿದ್ದು, ಓದುವ ಹವ್ಯಾಸದಿಂದ ಮಾತ್ರ ಜ್ಞಾನ ವೃದ್ಧಿಯಾಗಲಿದೆ ಎಂದು ಐಎಎಸ್ ಸಾಧಕಿ ದಾವಣಗೆರೆಯ ಸೌಭಾಗ್ಯಾ ಎಸ್.ಬೀಳಗಿಮಠ ತಿಳಿಸಿದರು.

ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ರಾಜ್ಯ ಶಾಖೆ ಚಿತ್ರದುರ್ಗ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ, ಸಮತಾ ಸಾಹಿತ್ಯ ವೇದಿಕೆಯಿಂದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸನ್ಮಾನ, ಮುಂಗಾರು ಕವಿಗೋಷ್ಠಿ ಕಲಾ ಸಂಭ್ರಮ, ಉಚಿತ ನೋಟ್‌ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲರಲ್ಲೂ ಒಂದಿಲ್ಲೊಂದು ರೀತಿಯ ಶಕ್ತಿಯಿದೆ. ಯಾರಲ್ಲಿಯೂ ಕೀಳರಿಮೆ ಬೇಡ. ಜಾತಿ ಮುಖ್ಯವಲ್ಲ. ಮಾನವೀಯತೆ ದೊಡ್ಡದು. ಜೀವನದಲ್ಲಿ ವಿದ್ಯಾರ್ಥಿಗಳು ದೊಡ್ಡ ಗುರಿಯಿಟ್ಟುಕೊಂಡು ಅದನ್ನು ನನಸಾಗಿಸಿಕೊಳ್ಳುವಲ್ಲಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ನೇಸರ ಚಾರಿಟೆಬಲ್ ಅಧ್ಯಕ್ಷ ಡಾ.ಎಚ್.ಶಿವಣ್ಣ ಮಾತನಾಡಿ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಪ್ರತಿಭಾವಂತರನ್ನು ಹೊರತರಲು ಇರುವ ಉತ್ತಮ ವೇದಿಕೆ ಎಂದರು.

ಪರಿಷತ್ ಅಧ್ಯಕ್ಷ ಕೆ.ಪರಶುರಾಮ್ ಗೊರಪ್ಪರ್ ಮಾತನಾಡಿ, ಕಲಾವಿದರ ಮಾಸಾಶನ ಹೆಚ್ಚಿಸಬೇಕು. ಈ ಪೈಕಿ ಬಡವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಆಲಿ, ನಿವೃತ್ತ ಯೋಧ ಕೂನಬೇವಿನ ಓ.ಜಯಣ್ಣ, ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ, ಪರಿಷತ್ ಗೌರವಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಪದಾಧಿಕಾರಿಗಳಾದ ಆರ್.ತಿಪ್ಪೇಸ್ವಾಮಿ, ಯಲ್ಲೇಶ್, ತಂಬೂರಿ ಕೃಷ್ಣಪ್ಪ, ವೈ.ಉಷಾದೇವಿ, ಸಾಹಿತಿ ಜಯಲಕ್ಷ್ಮಿನಾಯ್ಕಿ, ಕಿರುತೆರೆ ನಟಿ ಇಂದ್ರಾ ಸುಧಾ, ದಿವುಶಂಕರ್, ಓ.ನರಸಿಂಹಮೂರ್ತಿ, ಕೆ.ಪಾಪಯ್ಯ, ಎಸ್.ಎಚ್.ಶಫೀವುಲ್ಲಾ, ಶರಣಯ್ಯಸ್ವಾಮಿ ಬೀಳಗಿಮಠ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net