ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ

PH 03
Published on

ಮಳಖೇಡ: ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಬಿಂಬಿಸುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಐತಿಹಾಸಿಕ ರಾಷ್ಟçಕೂಟರ ಕೋಟೆಗೆ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದ ಅವರು, ನಮ್ಮ ಸ್ಮಾರಕ ದರ್ಶನ, ಸಂರಕ್ಷಣೆ ಪ್ರವಾಸ ಯೋಜನೆಯಡಿ ಐತಿಹಾಸಿಕ ಸ್ಮಾರಕಗಳ ಉಳಿವಿಗೆ ಸರ್ಕಾರ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಗೆ ತನ್ನದೇ ಆದ ಕೊಡುಗೆ ನೀಡಿ ಕಾವೇರಿಯಿಂದ ಗೋದಾವರಿವರೆಗೂ ರಾಜ್ಯವನ್ನು ವಿಸ್ತರಿಸಿದ ರಾಷ್ಟçಕೂಟರ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಹೆಮ್ಮೆಯ ಅರಸ ನೃಪತುಂಗನ ಪ್ರತಿಮೆಯನ್ನು ಕೋಟೆ ಆವರಣದಲ್ಲಿ ಪ್ರತಿಷ್ಠಾಪಿಸುವುದಾಗಿ ವಾಗ್ದಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಹಿಂದೆ ನಾನು ಪ್ರವಾಸೋದ್ಯಮ ಸಚಿವನಿದ್ದಾಗ ಅನುದಾನ ನೀಡಿ ಕೋಟೆ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದೆ. ಈಗಲೂ ಅದನ್ನು ಮುಂದುವರಿಸಲಾಗುವುದು. ನಮ್ಮದು ಜನರನ್ನು ಆಳುವ ಅಲ್ಲ, ಜನರ ಸಮಸ್ಯೆ ಆಲಿಸುವ ಸರ್ಕಾರ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಗ್ರಾಪಂ ಅಧ್ಯಕ್ಷ ಚನ್ನಯ್ಯ ಪುರಾಣಿಕ, ಪ್ರಮುಖರಾದ ಬಸವರಾಜ ಪಾಟೀಲ್ ಊಡಗಿ, ಶಿವಶರಣರೆಡ್ಡಿ ಪಾಟೀಲ್, ರಾಜಶೇಖರ ಪುರಾಣಿಕ, ನಾಗೇಶ್ವರರಾವ ಮಾಲಿಪಾಟೀಲ್, ಬಸವರಾಜ ಮಾಲಿಪಾಟೀಲ್, ಸುದರ್ಶನರೆಡ್ಡಿ, ಸತೀಶರೆಡ್ಡಿ ಪಾಟೀಲ್, ಜೈಭೀಮ ಊಡಗಿ, ದಿನೇಶ ಪಾಟೀಲ್, ಅಲಿಆಗಾ ಜಾಗೀರದಾರ್, ಶ್ರೀನಿವಾಸ ಸಂಗಾವಿ, ರುದ್ರು ಪಿಲ್ಲಿ, ಫಯಾಜ್ ಇನಾಮದಾರ್, ಅಂಬರೀಷ ಗುಡಿ, ಡಿಸಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಇತರರಿದ್ದರು.
ತಹಸೀಲ್ದಾರ್ ಶ್ರೀಯಾಂಕ್ ಧನಶ್ರೀ ಸ್ವಾಗತಿಸಿದರು. ದೇವರಾಜ ನಿರೂಪಣೆ ಮಾಡಿ ವಂದಿಸಿದರು. ರಾಷ್ಟçಕೂಟರ ಕೋಟೆ ಅಭಿವೃದ್ಧಿಗಾಗಿ ದತ್ತು ಪಡೆದ ಹೈದರಾಬಾದ್‌ನ ಕೃಷ್ಣ ಕ್ರಿಟಿ ಫೌಂಡೇಷನ್ ಮಾಲೀಕ ಕೃಷ್ಣ ಲಾಹೋಟಿ ಅವರಿಗೆ ಸಚಿವದ್ವಯರು ದತ್ತು ಒಪ್ಪಿಗೆ ಪತ್ರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net