

ಚಿತ್ರದುರ್ಗ: ಒಳ ಮೀಸಲು ಜಾರಿಗೊಳಿಸಬೇಕೆಂಬ ಸರ್ಕಾರದ ನಡೆಗೆ ಕೋರ್ಟ್ ತೀರ್ಪಿನಿಂದ ಆನೆ ಬಲ ದೊರೆತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ಸೇರಿ ವಿವಿಧ ಇಲಾಖೆಗಳು ಆರಂಭಿಸಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಿ ಮೀಸಲು ವರ್ಗೀಕರಣ ಬಳಿಕ ಹೊಸದಾಗಿ ಅರ್ಜಿ ಆಹ್ವಾನಿಸಬೇಕು. ಶೇ.6 ರಷ್ಟು ಜನಸಂಖ್ಯೆ ಇದ್ದರೂ ಶೇ.1ರಷ್ಟು ಮೀಸಲು ಪಡೆಯ ಲಾಗದ ಮಾದಿಗ ಸಮುದಾಯಕ್ಕೆ ಕೋರ್ಟ್ ತೀರ್ಪು ಬದುಕುವ ಭರವಸೆ ಮೂಡಿಸಿದೆ. ರಾಜ್ಯಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು.