ಇಂದ್ರಧನುಷ್ ಅಭಿಯಾನಕ್ಕೆ ಸಚಿವರ ಚಾಲನೆ

IMG-20230807-WA0021.jpg
Published on

ದಾವಣಗೆರೆ: ದಡಾರ, ರುಬೆಲ್ಲಾ ರೋಗ ನಿಯಂತ್ರಣದ ಭಾಗವಾಗಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಲ್ಲಿನ ಗೃಹ ಕಚೇರಿಯಲ್ಲಿ ಸೋಮವಾರ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಇಂದ್ರಧನುಷ್ ಲಸಿಕೆ ಹಾಕಲು 710 ಗರ್ಭಿಣಿ ಫಲಾನುಭವಿಗಳು ಮತ್ತು 2 ವರ್ಷದೊಳಗಿನ 3154 ಮಕ್ಕಳು ಹಾಗೂ 2ರಿಂದ ಐದು ವರ್ಷದೊಳಗಿನ 170 ಮಕ್ಕಳನ್ನು ಗುರ್ತಿಸಲಾಗಿದೆ. ಜಿಲ್ಲೆಯ ಜನರು ಮಕ್ಕಳಿಗೆ ಸಕಾಲಿಕ ಲಸಿಕೆ ಹಾಕಿಸಿ ರೋಗಗಳು ಬಾರದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ ಮಿಷನ್ ಇಂದ್ರಧನುಷ್ ಲಸಿಕೆಯನ್ನು ಆ.12 ರವರೆಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಹಾಕಲಾಗುತ್ತದೆ. ಗರ್ಭಧಾರಣೆ ಸಮಯದಿಂದ ಮಗು ಹುಟ್ಟಿದಾಗ ಮತ್ತು ನಂತರದಲ್ಲಿ ಮಗುವಿಗೆ ಸಿಗಬೇಕಾದ ಲಸಿಕೆ ಸಿಗದಿದ್ದಲ್ಲಿ ಅಂತಹ 5 ವರ್ಷದೊಳಗಿನ ಮಗುವಿಗೆ ಲಸಿಕೆ ಹಾಕಲಾಗುತ್ತದೆ.

ಪ್ರಥಮ ಹಂತದಲ್ಲಿ ಆ.12 ರ ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಯಾರು ಲಸಿಕೆಗಳಿಂದ ಹೊರಗಿರುವ ಮಕ್ಕಳಿಗೆ ಕಡ್ಡಾಯವಾಗಿ ಇದನ್ನು ಹಾಕಿಸಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.

ಜಿಪಂ ಸಿಇಒ ಸುರೇಶ್ ಇಟ್ನಾಳ್, ಡಿಎಚ್‌ಒ ಡಾ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ವಾಸಂತಿ ಉಪ್ಪಾರ್, ಜಿಲ್ಲಾ

ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕರಾಧ್ಯ ಹಾಗೂ ಕಾರ್ಯಕ್ರಮ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net