ಅಪ್ರಾಪ್ತರಿಗೆ ಬೈಕ್ ಕೊಟ್ಟರೆ ಕೇಸ್

sp channabasavanna
Published on

ಬೀದರ್: ಪಾಲಕರೇ ಎಚ್ಚರ. ಮಕ್ಕಳ ಮೇಲಿನ ಪ್ರೀತಿಯಿಂದ ಅಪ್ರಾಪ್ತರಿಗೆ ಚಾಲನೆ ಮಾಡಲು ಬೈಕ್ ಕೊಟ್ಟರೆ ಜೋಕೆ. ನಿರ್ಲಕ್ಷ್ಯ ವಹಿಸಿ ವಾಹನಗಳನ್ನು ಚಲಾಯಿಸಲು ಅಪ್ರಾಪ್ತರಿಗೆ ನೀಡಿದರೆ ಪೊಲೀಸರು ಭಾರಿ ದಂಡ ವಿಧಿಸಲಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಅಪ್ತಾಪ್ತರು ಬೈಕ್ ಓಡಿಸುತ್ತಿರುವ ಪ್ರಕರಣ ಅಧಿಕವಾಗುತ್ತಿರುವ ಕಾರಣ ಖಾಕಿಪಡೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಪ್ರಾಪ್ತರಿಗೆ ಬೈಕ್ ನೀಡುವ ಪಾಲಕರು ಮತ್ತು ವಾಹನ ಮಾಲೀಕರಿಗೆ ಮೋಟಾರು ವಾಹನ ಕಾಯ್ದೆ ಅಡಿ 25 ಸಾವಿರ ರೂ. ದಂಡ ಅಥವಾ ಮೂರು ತಿಂಗಳು ಸಾಧಾರಣ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಈ ವಿಶೇಷ ಕಾರ್ಯಾಚರಣೆ ಸೆ.1ರಿಂದ ನಗರದಲ್ಲಿ ಜಾರಿಯಾಗಲಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
ಬೈಕ್ ಚಾಲನೆ ವೇಳೆ ಸಿಕ್ಕಿಬೀಳುವ ಅಪ್ರಾಪ್ತ ಮಕ್ಕಳು ಮತ್ತು ಅವರ ಪಾಲಕರಿಗೆ ದಂಡ ವಿಸುವುದರೊಂದಿಗೆ ಠಾಣೆಗೆ ಕರೆಯಿಸಿ ಎಚ್ಚರಿಕೆಯನ್ನು ಈ ಹಿಂದೆ ನೀಡಲಾಗುತ್ತಿತ್ತು. ಆದರೆ ನಿತ್ಯವೂ ಇಂಥ ಪ್ರಕರಣ ಹೆಚ್ಚುತ್ತಿರುವ ಕಾರಣ ವಿಶೇಷ ಕಾರ್ಯಾಚರಣೆಗೆ ಪೊಲೀಸರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net