ಅಥಣಿ ಕ್ಷೇತ್ರದ ೧೦ ಸ್ಕೂಲ್ ಉನ್ನತೀಕರಣ

9Athanigrameen3
Published on

ಅಥಣಿ ಗ್ರಾಮೀಣ: ರಾಜ್ಯದಲ್ಲಿ ಒಟ್ಟು ೧೪೭ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗಳನ್ನಾಗಿ ಮಂಜೂರು ಮಾಡಲಾಗಿದೆ. ಅದರಲ್ಲಿ ಅಡಹಳ್ಳಟ್ಟಿ, ನಂದಗಾಂವ, ಸುಟ್ಟಟ್ಟಿ, ರಾಮತೀರ್ಥ, ನಂದೇಶ್ವರ, ಅಥಣಿ ವಿಕ್ರಂಪುರ, ಅಥಣಿ ಗವಿಸಿದ್ಧನಮಡ್ಡಿ, ಬೇವನೂರ ಹಾಗೂ ಖವಟಕೋಪ್ಪ ಸೇರಿ ಒಟ್ಟು ೧೦ ಶಾಲೆಗಳು ಉನ್ನತಿಗೊಂಡಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ಮಂಜೂರಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಯುವ ಮುಖಂಡ ಚಿದಾನಂದ ಸವದಿ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಮಹಾದೇವ ಹಿಪ್ಪರಗಿ, ಶಿವು ಗುಡ್ಡಾಪುರ, ಚಿದಾನಂದ ಮಠಪತಿ, ಸೋಮನಿಂಗ ಬಿದರೊಳ್ಳಿ, ಘಟಿವಾಳಪ್ಪ ಗುಡ್ಡಾಪುರ, ಶಂಭು ಕೇರಿ, ವಿಠ್ಠಲ ಕೊಂಡಿ, ಕಲ್ಮೇಶ ಕಲಮಡಿ, ಶಿವಪ್ಪ ಖೋತ, ಶ್ರೀಶೈಲ ತಾಂವಶಿ, ಸಂಜೀವ ಸವದಿ, ಸಂಗಪ್ಪ ಶೇಗುಣಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net