More

    ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ

    ಧಾರವಾಡ: ತಾಲೂಕಿನ ಬೋಗೂರ ಗ್ರಾಮದ ಬಾಲಕಿ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದು ಪರ ಸಂಘಟನೆಗಳವರು ಗರಗ ಗ್ರಾಮದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

    ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ಬಶೀರ ಹಾಗೂ ಕುಟುಂಬದವರ ಮೇಲೆ ಐಪಿಸಿ ಕಲಂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

    ವಿಶ್ವ ಹಿಂದು ಪರಿಷದ್ ಪ್ರಾಂತ ಪ್ರಮುಖ ಮಲ್ಲಿಕಾರ್ಜುನ ಸತ್ತಿಗೇರಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಅಕ್ಷಯ ಕುಲಕರ್ಣಿ, ಆರ್​ಎಸ್​ಎಸ್​ನ ತಾಲೂಕು ಕಾರ್ಯವಾಹ ನರಸಪ್ಪ ಬಟ್ಟಂಗಿ, ಸಂಚಾಲಕರಾದ ಶಿವಾನಂದ ಸತ್ತಿಗೇರಿ, ನಾಗರಾಜ ಯಾದವ್, ಜಯತೀರ್ಥ, ಬಿಜೆಪಿ ಮುಖಂಡ ರುದ್ರಪ್ಪ ಅರಿವಾಳ, ಸಂಬಾಜಿ, ಮಹಾದೇವ ದಂಡಿನ, ಇತರರು ಪಾಲ್ಗೊಂಡಿದ್ದರು.

    ಗಲ್ಲುಶಿಕ್ಷೆಗೆ ಆಗ್ರಹಿಸಿ ಅಭಿಯಾನ

    ಆರೋಪಿ ಬಶೀರನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿರುವಾಗಲೇ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿಯೂ ಅಭಿಯಾನ ನಡೆದಿದೆ.

    ವಾಯ್್ಸ ಆಫ್ ಧಾರವಾಡ ಶಿರೋನಾಮೆಯಲ್ಲಿ ಜಸ್ಟೀಸ್ ಫಾರ್ ರೂಪಾ ಎಂಬ ಅಭಿಯಾನದ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಆರೋಪಿ ಬಶೀರನ ಫೋಟೊ ಹಾಕಿ, ಸಾಂಕೇತಿಕವಾಗಿ ನೇಣಿನ ಕುಣಿಕೆ ಚಿತ್ರಿಸಲಾಗಿದೆ. ಬಶೀರನಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಲಾಗಿದೆ. ಜಾಲತಾಣದಲ್ಲಿ ಹಲವರು ಈ ಅಭಿಯಾನಕ್ಕೆ ದನಿಗೂಡಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts