More

    ಜೊಮ್ಯಾಟೋ ಡೆಲಿವರಿ ಯುವಕನಿಗೆ ಬೈಕ್ ಕೊಡುಗೆಯಾಗಿ ಕೊಟ್ಟ ಗ್ರಾಹಕರು; ಕಾರಣ ತಿಳಿದರೆ ಅಯ್ಯೋ ಅನಿಸುತ್ತೆ!

    ನವದೆಹಲಿ: ಜೊಮ್ಯಾಟೋ ಮೂಲಕ ಫುಡ್​ ಡೆಲಿವರಿ ಮಾಡುವವರು ಆಗಾಗ ಒಳ್ಳೆಯದಕ್ಕೋ ಕೆಟ್ಟದಕ್ಕೋ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಜೊಮ್ಯಾಟೋ ಡೆಲಿವರಿ ಯುವಕನೊಬ್ಬ ಸುದ್ದಿಯಾಗಿದ್ದಾನೆ. ಹೀಗೆ ಆತ ಸುದ್ದಿಯಾಗಿ ಗಮನ ಸೆಳೆಯಲು ಕಾರಣ ಆತನಿಗೆ ಗ್ರಾಹಕರಿಂದ ಕೊಡುಗೆಯಾಗಿ ಸಿಕ್ಕ ಬೈಕ್.

    ಒಂದೇ ಒಂದು ಆರ್ಡರ್​ ಡೆಲಿವರಿ ಕೊಟ್ಟಿದ್ದರಿಂದ ಈ ಜೊಮ್ಯಾಟೋ ಯುವಕನ ಬದುಕಿನ ದೊಡ್ಡ ಕಷ್ಟವೊಂದು ಪರಿಹಾರವಾಗಿದೆ. ಮಹಮದ್ ಅಖೀಲ್ ಎಂಬ ಈ ಡೆಲಿವರಿ ಯುವಕನಿಗೆ ಹೀಗೆ ದೊಡ್ಡ ಸಹಾಯವಾಗಿ ಬಂದಿರುವುದು ಜೊಮ್ಯಾಟೋ ಮೂಲಕ ಫುಡ್ ಆರ್ಡರ್ ಮಾಡಿದ್ದ ರುಬಿನ್ ಮುಖೇಶ್ ಎಂಬ ಗ್ರಾಹಕ.

    ಹೈದರಾಬಾದ್​ನ ಈ ಟೆಕಿ ರುಬಿನ್ ಮಹೇಶ್ ಜೂ. 14ರಂದು ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಡೆಲಿವರಿಗೆ ಬಂದಿದ್ದ ಮಹಮದ್ ಅಖೀಲ್​, ಕೆಳಕ್ಕೆ ಬಂದು ಅದನ್ನು ಪಡೆಯುವಂತೆ ಹೇಳಿದ್ದಾನೆ. ನಾನು ಆ ದಿನ ಕೆಳಕ್ಕೆ ಹೋಗಿ ಆರ್ಡರ್ ಪಡೆಯಲು ಹೋದಾಗ ಆ ವ್ಯಕ್ತಿ ಸೈಕಲ್ ಮೇಲೆ ಕೂತಿದ್ದ. ಅದರಲ್ಲೂ 20 ಕಿ.ಮೀ. ದೂರವನ್ನು ಆ ಮಳೆಯಲ್ಲಿ ಬರೀ 9 ನಿಮಿಷದಲ್ಲಿ ಸೈಕಲ್​ನಲ್ಲೇ ಕ್ರಮಿಸಿಕೊಂಡು ಬಂದು ಡೆಲಿವರಿ ನೀಡಿದ್ದ. ಈತನಿಗೆ ನಾವೇನಾದರೂ ಸಹಾಯ ಮಾಡಲೇಬೇಕು ಎಂದು ಆಹಾರಪ್ರಿಯರು ಇರುವ ಫೇಸ್​ಬುಕ್​ ಗ್ರೂಪ್ ಒಂದರಲ್ಲಿ ಪೋಸ್ಟ್ ಮಾಡಿದ್ದೆ ಎಂದು ರುಬಿನ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ರುಬಿನ್ ಪೋಸ್ಟ್ ನೋಡಿ ಅಖೀಲ್ ಕಷ್ಟಕ್ಕೆ ಮರುಗಿದ ಆಹಾರಪ್ರಿಯರು ಕೆಲವೇ ಗಂಟೆಗಳಲ್ಲಿ ಕ್ರೌಡ್​ಫಂಡ್ ಮಾಡಿ 73,000 ರೂ. ಸಂಗ್ರಹಿಸಿದ್ದಾರೆ. ಅಖೀಲ್​ಗೆ ಬೈಕ್​ ಕೊಳ್ಳಲು 65,000 ರೂ. ಅಗತ್ಯವಿದ್ದಿದ್ದರೂ ಹೆಚ್ಚುವರಿಯಾಗಿಯೇ ಹಣ ಸಂಗ್ರಹವಾಗಿದ್ದು, ಅವರು ಜೂ. 18ರಂದು ಬೈಕ್​ ಜತೆ ಹೆಲ್ಮೆಟ್​, ಜರ್ಕಿನ್, ಸ್ಯಾನಿಟೈಸರ್​ಗಳನ್ನೂ ಕೊಟ್ಟು ಉಪಕಾರ ಮಾಡಿದ್ದಾರೆ.

    ಚಮ್ಮಾರರೊಬ್ಬರ ಪುತ್ರನಾಗಿರುವ ಅಖೀಲ್​, ಬಿ.ಟೆಕ್​ ಮೂರನೇ ವರ್ಷದ ವಿದ್ಯಾರ್ಥಿ. ನಾನು ಒಂದು ವರ್ಷದಿಂದ ಸೈಕಲ್​ನಲ್ಲೇ ಜೊಮ್ಯಾಟೋ ಡೆಲಿವರಿ ಮಾಡುತ್ತಿದ್ದೇನೆ. ನನಗೆ ಈಗ ಬೈಕ್ ಸಿಕ್ಕಿರುವುದರಿಂದ ದಿನಕ್ಕೆ 20-25 ಪಾರ್ಸೆಲ್ ಡೆಲಿವರಿ ಮಾಡಬಹುದು. ಬೈಕ್ ಕೊಡಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾನೆ. ಅಂದಹಾಗೆ ಶಿಕ್ಷಣಕ್ಕೆ ಬೇಕಾದ ಖರ್ಚು ಹೊಂದಿಸಲು ಅಖೀಲ್ ಜೊಮ್ಯಾಟೋ ಡೆಲಿವರಿ ಕೆಲಸ ಮಾಡುತ್ತಿದ್ದಾನೆ. (ಏಜೆನ್ಸೀಸ್)

    ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts