More

    ಯೂಟ್ಯೂಬ್​ ವೀವ್ಸ್​ಗಾಗಿ ವಿಮಾನ ಪತನ ಮಾಡಿದ ಯೂಟ್ಯೂಬರ್​ಗೆ 20 ವರ್ಷ ಜೈಲು ಶಿಕ್ಷೆ ಸಾಧ್ಯತೆ!

    ನ್ಯೂಯಾರ್ಕ್​: ಯೂಟ್ಯೂಬ್​ ವಿಡಿಯೋಗಾಗಿ ತನ್ನ ವಿಮಾನವನ್ನೇ ಪತನ ಮಾಡಿದ ಮಾಜಿ ಒಲಿಂಪಿಯನ್​ ಹಾಗೂ ಯೂಟ್ಯೂಬರ್​ ಟ್ರೆವೊರ್​ ಜಾಕೋಬ್​, 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಯುನೈಟೆಡ್​ ಸ್ಟೇಟ್ಸ್​ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

    ಈಗಾಗಲೇ ಜಾಕೋಬ್​ ಅವರ ಖಾಸಗಿ ಪೈಲಟ್​ ಪ್ರಮಾಣ ಪತ್ರವನ್ನು ಯುನೈಟೆಡ್​ ಸ್ಟೇಟ್ಸ್​ ಫೆಡರಲ್​ ಅವಿಯೇಷನ್​ ಅಡ್ಮಿನಿಸ್ಟ್ರೇಷನ್​ (ಎಫ್​ಎಎ)​ ರದ್ದು ಮಾಡಿದೆ. ಸದ್ಯ ಜಾಕೋಬ್​ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

    ಅಂದಹಾಗೆ ಜಾಕೋಬ್​ ತಮ್ಮ ಯೂಟ್ಯೂಬ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ 3 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಪತ್ನಿಯ ಶೋಕಿಗೆ ಬಲಿಯಾಯ್ತು ಸುಂದರ ಕುಟುಂಬ; ಮಕ್ಕಳೊಂದಿಗೆ ಪ್ರಾಣಬಿಟ್ಟ ತಂದೆ

    ನನ್ನ ವಿಮಾನವನ್ನು ಪತನ

    ನ್ಯೂಯಾರ್ಕ್​ ಟೈಮ್ಸ್​ ಪ್ರಕಾರ ಸಾಮಾಜಿಕ ಜಾಲತಾಣದ ವೀವ್ಸ್​ಗಾಗಿ 2021ರಲ್ಲಿ ವಿಮಾನವನ್ನು ಪತನ ಮಾಡಿದ ಆರೋಪದಡಿಯಲ್ಲಿ ಮಿ. ಜಾಕೋಬ್ ಅವರು ತನಿಖೆಯನ್ನು ಎದುರಿಸುತ್ತಿದ್ದಾರೆ. ತನ್ನ ವಿಡಿಯೋಗೆ ” ನಾನು ನನ್ನ ವಿಮಾನವನ್ನು ಪತನ ಮಾಡುತ್ತೇನೆ” ಎಂದು ಶೀರ್ಷಿಕೆ ನೀಡಿದ್ದು, ದೋಷಪೂರಿತ ಎನ್ನಲಾದ ನಾಗರಿಕ ವಿಮಾನದಿಂದ ಪ್ಯಾರಚೂಟ್​ ಮೂಲಕ ಜಾಕೋಬ್​ ಹೊರ ಜಿಗಿಯುವುದು ಮತ್ತು ವಿಮಾನವೂ ಕ್ಯಾಲಿಫೋರ್ನಿಯಾದಲ್ಲಿರುವ ಲಾಸ್​ ಪಡ್ರೆಸ್​ ರಾಷ್ಟ್ರೀಯ ಅರಣ್ಯದಲ್ಲಿ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಉದ್ದೇಶಪೂರ್ವಕವಾಗಿಯೇ ಪತನ

    ವಿಡಿಯೋವೂ ವಾಯುಯಾನ ಉತ್ಸಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಜಾಕೋಬ್​ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ವರದಿ ಒಂದನ್ನು ಎಫ್​ಎಎ ಸಿದ್ಧಪಡಿಸಿದ್ದು, ಇಂಜಿನ್​ ಫೇಲ್​ ಆಗಿದೆ ಎಂದು ಜಾಕೋಬ್​ ಹೇಳುವುದಕ್ಕೂ ಮುಂಚೆಯೇ ಆತ ಪ್ಯಾರಚೂಟ್​ ಸಿದ್ಧಪಡಿಸಿಕೊಂಡು ವಿಮಾನದ ಎಡಗಡೆ ಇರುವ ಬಾಗಿಲನ್ನು ತೆರೆದರು. ಹೀಗಾಗಿ ಜಾಕೋಬ್​ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ವರದಿ ಹೇಳಿದೆ.

    ಸೇಫ್​ ಆಗಿ ಲ್ಯಾಂಡ್​ ಮಾಡಬಹುದಾಗಿತ್ತು

    ಇದಿಷ್ಟೇ ಅಲ್ಲದೆ, ಜಾಕೋಬ್​ ಸಹಾಯಕ್ಕಾಗಿ ಏರ್​ ಟ್ರಾಫಿಕ್​ ಕಂಟ್ರೋಲ್ ಅನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿಲ್ಲ. ಅಲ್ಲದೆ, ಇಂಜಿನ್​ ಅನ್ನು ಮರು ಆರಂಭಿಸುವ ಪ್ರಯತ್ನವನ್ನು ಜಾಕೋಬ್​ ಮಾಡಿಲ್ಲ. ಪ್ರಯತ್ನ ಮಾಡಿದ್ದರೆ ಇಂಜಿನ್​ ಫೇಲ್​ ಆಗಿದ್ದರೂ ವಿಮಾನವನ್ನು ಸೇಫ್​ ಆಗಿ ಲ್ಯಾಂಡ್​ ಮಾಡಬಹುದಾಗಿತ್ತು ಎಂದು ಎಫ್​ಎಎ ಜಾಕೋಬ್​ ವಿರುದ್ಧ ವರದಿ ನೀಡಿದೆ.

    ಇದನ್ನೂ ಓದಿ: ಸೊಳ್ಳೆ ಕಡಿತದಿಂದ ಪುತ್ರನ ಸಾವು, ವಿಮೆ ಹಣಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ತಾಯಿ: ಆಮೇಲೇನಾಯ್ತು?

    ಜಾಕೋಬ್​ ಅವರು ಫೆಡರಲ್ ಅವಿಯೇಷನ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರ ಖಾಸಗಿ ಪೈಲಟ್​ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಸಂಸ್ಥೆಯ ಯಾವುದೇ ವಿಮಾನವನ್ನು ನಿರ್ವಹಿಸಲು ಇರುವ ಅನುಮತಿಯನ್ನು ಸಹ ಕೊನೆಗೊಳಿಸಿದೆ. ಆದೇಶವನ್ನು ಅನುಸರಿಸದಿದ್ದರೆ ಮುಂದಿನ ಕಾನೂನು ಜಾರಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಈ ಹಿಂದೆಯೇ ನೀಡಲಾಗಿತ್ತು. (ಏಜೆನ್ಸೀಸ್​)

    ವಿಡಿಯೋಗೋಸ್ಕರ ವಿಮಾನವನ್ನೇ ಪತನ ಮಾಡಿದ ಪೈಲಟ್​​ಗೆ ಶಾಕ್​​: ಎದೆ ಝಲ್​ ಎನಿಸುವ ದೃಶ್ಯವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts