More

    ವಿಡಿಯೋಗೋಸ್ಕರ ವಿಮಾನವನ್ನೇ ಪತನ ಮಾಡಿದ ಪೈಲಟ್​​ಗೆ ಶಾಕ್​​: ಎದೆ ಝಲ್​ ಎನಿಸುವ ದೃಶ್ಯವಿದು!

    ನ್ಯೂಯಾರ್ಕ್​: ವಿಡಿಯೋಗೋಸ್ಕರ ತನ್ನ ವಿಮಾನವನ್ನೇ ಪತನ ಮಾಡಿದ ಮಾಜಿ ಒಲಿಂಪಿಯನ್​ ಹಾಗೂ ಯೂಟ್ಯೂಬರ್​ ಟ್ರೆವೊರ್​ ಜಾಕೋಬ್ ಅವರ ಖಾಸಗಿ ಪೈಲಟ್​ ಪ್ರಮಾಣ ಪತ್ರವನ್ನು ಯುನೈಟೆಡ್​ ಸ್ಟೇಟ್ಸ್​ ಫೆಡರಲ್​ ಅವಿಯೇಷನ್​ ಅಡ್ಮಿನಿಸ್ಟ್ರೇಷನ್​ (ಎಫ್​ಎಎ)​ ರದ್ದು ಮಾಡಿದೆ.

    ನ್ಯೂಯಾರ್ಕ್​ ಟೈಮ್ಸ್​ ಪ್ರಕಾರ ಸಾಮಾಜಿಕ ಜಾಲತಾಣದ ವ್ಯೂವ್ಸ್​ಗಾಗಿ 2021ರಲ್ಲಿ ವಿಮಾನವನ್ನು ಪತನ ಮಾಡಿದ ಆರೋಪದಡಿಯಲ್ಲಿ ಮಿ. ಜಾಕೋಬ್ ಅವರು ತನಿಖೆಯನ್ನು ಎದುರಿಸುತ್ತಿದ್ದಾರೆ. ವಿಡಿಯೋಗೆ ” ನಾನು ನನ್ನ ವಿಮಾನವನ್ನು ಪತನ ಮಾಡುತ್ತೇನೆ” ಎಂದು ಶೀರ್ಷಿಕೆ ನೀಡಿದ್ದು, ದೋಷಪೂರಿತ ಎನ್ನಲಾದ ನಾಗರಿಕ ವಿಮಾನದಿಂದ ಪ್ಯಾರಚೂಟ್​ ಮೂಲಕ ಜಾಕೋಬ್​ ಹೊರ ಜಿಗಿಯುವುದು ಮತ್ತು ವಿಮಾನವೂ ಕ್ಯಾಲಿಫೋರ್ನಿಯಾದಲ್ಲಿರುವ ಲಾಸ್​ ಪಡ್ರೆಸ್​ ರಾಷ್ಟ್ರೀಯ ಅರಣ್ಯದಲ್ಲಿ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ವಿಡಿಯೋವೂ ವಾಯುಯಾನ ಉತ್ಸಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಜಾಕೋಬ್​ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ವರದಿ ಒಂದನ್ನು ಎಫ್​ಎಎ ಸಿದ್ಧಪಡಿಸಿದ್ದು, ಇಂಜಿನ್​ ಫೈಲ್​ ಆಗಿದೆ ಎಂದು ಜಾಕೋಬ್​ ಹೇಳುವುದಕ್ಕೂ ಮುಂಚೆಯೇ ಆತ ಪ್ಯಾರಚೂಟ್​ ಸಿದ್ಧಪಡಿಸಿಕೊಂಡು ವಿಮಾನದ ಎಡಗಡೆ ಇರುವ ಬಾಗಿಲನ್ನು ತೆರೆದರು. ಹೀಗಾಗಿ ಜಾಕೋಬ್​ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ವರದಿ ಹೇಳಿದೆ.

    ಇದಲ್ಲದೆ, ಜಾಕೋಬ್​ ಸಹಾಯಕ್ಕಾಗಿ ಏರ್​ ಟ್ರಾಫಿಕ್​ ಕಂಟ್ರೋಲ್ ಅನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಿಲ್ಲ. ಅಲ್ಲದೆ, ಇಂಜಿನ್​ ಅನ್ನು ಮರು ಆರಂಭಿಸುವ ಪ್ರಯತ್ನವನ್ನು ಜಾಕೋಬ್​ ಮಾಡಿಲ್ಲ. ಪ್ರಯತ್ನ ಮಾಡಿದ್ದರೆ ಇಂಜಿನ್​ ಫೇಲ್​ ಆಗಿದ್ದರೂ ವಿಮಾನವನ್ನು ಸೇಫ್​ ಆಗಿ ಲ್ಯಾಂಡ್​ ಮಾಡಬಹುದಾಗಿತ್ತು ಎಂದು ಎಫ್​ಎಎ ಜಾಕೋಬ್​ ವಿರುದ್ಧ ವರದಿ ನೀಡಿದೆ.

    ಜಾಕೋಬ್​ ಅವರು ಫೆಡರಲ್ ಅವಿಯೇಷನ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರ ಖಾಸಗಿ ಪೈಲಟ್​ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಸಂಸ್ಥೆಯ ಯಾವುದೇ ವಿಮಾನವನ್ನು ನಿರ್ವಹಿಸಲು ಇರುವ ಅನುಮತಿಯನ್ನು ಸಹ ಕೊನೆಗೊಳಿಸಿದೆ. ಆದೇಶವನ್ನು ಅನುಸರಿಸದಿದ್ದರೆ ಮುಂದಿನ ಕಾನೂನು ಜಾರಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

    ಬೇಸಿಗೆಯ ಬಿಸಿಲಿನಷ್ಟೇ ಸುಡುತ್ತಿರುವ ನಿಂಬೆ ಹಣ್ಣಿನ ದರ: ಬೆಲೆ ಇಳಿಸುವಂತೆ ಆದಿಶಕ್ತಿಗೆ ವಿಶೇಷ ತಂತ್ರ ಪೂಜೆ!

    ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ಕೇಸ್​: ಮತ್ತಿಬ್ಬರು ಪೊಲೀಸರ ಬಂಧನ, ಇಂಜಿನಿಯರ್ ಮನೆ ಮೇಲೆ ದಾಳಿ

    ‘ಸುದೀಪ್​ ನೀವು ತುಂಬಾ ಸಾತ್ವಿಕರಾಗ್ಬೇಡಿ ಒಂದ್ಸಲ ತರಾಟೆಗೆ ತೆಗೆದುಕೊಳ್ಳಿ ಆಗ ಯಾರೂ ನಿಮ್ಮ ತಂಟೆಗೆ ಬರಲ್ಲ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts