More

  ನಾನು ಹೋದಾಗ ನೀವು ನನ್ನನ್ನು ಮಿಸ್ ಮಾಡ್ಕೊಳ್ತೀರಿ: ಶಿವರಾಜ್ ಸಿಂಗ್ ಚೌಹಾಣ್​

  ಮಧ್ಯಪ್ರದೇಶ: ನಿಮಗೆ ನನ್ನಂಥ ಸಹೋದರ ಸಿಗಲ್ಲ. ನಾನು ಹೋದಾಗ ನೀವು ನನ್ನನ್ನು ಮಿಸ್ ಮಾಡ್ಕೊಳ್ತೀರಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಸೆಹೋರ್​ನ ಬುಧ್ನಿಯಲ್ಲಿ ಲಡ್ಕುಯಿನಲ್ಲಿ ಸಮಾವೇಶದಲ್ಲಿ ಮಾತನಾಡುತ್ತ ಅವರು ಈ ವಿಷಯ ಹೇಳಿದರು.

  ಭಾರತೀಯ ಜನತಾ ಪಕ್ಷ ಇವರನ್ನು ಮೂಲೆಗುಂಪಾಗಿಸಲು ಯತ್ನಿಸುತ್ತಿದೆ ಎಂಬ ಸುದ್ದಿಗಳ ನಡುವೆ ಇವರು ಹೀಗಂದಿರುವುದು ಕುತೂಹಲ ಕೆರಳಿಸಿದೆ. ನಾನು ಸರ್ಕಾರ ನಡೆಸುತ್ತಿಲ್ಲ, ನಾನು ಕುಟುಂಬವನ್ನು ನಡೆಸುತ್ತಿದ್ದೇನೆ. ನೀವೆಲ್ಲ ನನ್ನ ಕುಟುಂಬಸ್ಥರು. ನಿಮಗೆ ನನ್ನಂಥ ಸಹೋದರ ಸಿಗುವುದಿಲ್ಲ, ನಾನು ಹೋದಾಗ ನೀವು ನನ್ನನ್ನು ಮಿಸ್​ ಮಾಡಿಕೊಳ್ತೀರಿ ಎಂದು ಶಿವರಾಜ್​ಸಿಂಗ್ ಭಾವುಕರಾಗಿ ಮಾತನಾಡಿದ್ದಾರೆ.

  ನಾನು ಮಧ್ಯಪ್ರದೇಶದ ರಾಜಕಾರಣದ ವ್ಯಾಖ್ಯಾನವನ್ನೇ ಬದಲಿಸಿದ್ದೇನೆ. ನನ್ನ ಬಡ ಸಹೋದರ ಸಹೋದರಿಯರೇ, ರೈತ ಸಹೋದರ ಸಹೋದರಿಯರೇ, ನೀನು ವರ್ಷಗಳ ಕಾಲದ ಕಾಂಗ್ರೆಸ್ ಆಡಳಿತವನ್ನು ಕಂಡಿದ್ದೀರಿ. ಅವರ ಕಾಲದಲ್ಲಿ ಎಂದಾದರೂ ಇಂಥ ಸಾರ್ವಜನಿಕ ಕಾಳಜಿ ಇತ್ತೇ ಹೇಳಿ ಎಂದು ಕೇಳಿದ ಶಿವರಾಜ್​ ಸಿಂಗ್, ನನ್ನ ಮಾಂಸ ಮತ್ತು ಮೂಳೆ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಉಪಯುಕ್ತ ಎಂದಾದರೆ ನನ್ನ ಜೀವನ ಯಶಸ್ವಿಯಾದಂತೆ ಎಂದೂ ಸಾರ್ವಜನಿಕರನ್ನುದ್ದೇಶಿಸಿ ಹೇಳಿದ್ದಾರೆ.

  ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

  ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯಲು ಸರ್ಕಾರದ ಚಿಂತನೆ: ಇದನ್ನು ವಿರೋಧಿಸಿ ನೂರಾರು ಮಹಿಳೆಯರ ಅಹೋರಾತ್ರಿ ಪ್ರತಿಭಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts