More

    ಯುವಜನತೆ ಮೋದಿ ಬೇಡ ಅಂತಿದ್ದಾರೆ! ಪ್ರಧಾನಿ ಕನಸು ಬಿಟ್ಟುಬಿಡಿ: ರಾಹುಲ್ ಗಾಂಧಿ ಲೇವಡಿ

    ರಾಯಬರೇಲಿ: ತಮ್ಮ ತಾಯಿ, ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ (77) ಪ್ರತಿನಿಧಿಸಿದ್ದ ಕ್ಷೇತ್ರವಾದ ರಾಯಬರೇಲಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ರಾಹುಲ್ ಗಾಂಧಿ, ಇದೇ ಭದ್ರಕೋಟೆಯಿಂದ ಗೆಲುವು ಸಾಧಿಸಲು ಭರ್ಜರಿ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಶಿಬಿರಗಳಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ : ಪಾಂಡೇಶ್ವರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ

    ಇನ್ನು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡ ಸೋನಿಯಾ ಗಾಂಧಿ, “ಅಂದು ನನ್ನನ್ನು ಹೇಗೆ ನೋಡಿಕೊಂಡಿದ್ದೀರೋ, ಇಂದು ನನ್ನ ಮಗನನ್ನು ಸಹ ಅದೇ ರೀತಿ ಕಂಡು, ಗೆಲ್ಲಿಸಿ. ಖಂಡಿತ ಹೇಳ್ತೀನಿ ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಇಂದಿರಾ ಗಾಂಧಿ ಮತ್ತು ರಾಯಬರೇಲಿ ಜನ ನನಗೆ ಕಲಿಸಿಕೊಟ್ಟ ಪಾಠಗಳನ್ನೇ ಪ್ರಿಯಾಂಕಾ ಮತ್ತು ರಾಹುಲ್​ಗೂ ಕಲಿಸಿದ್ದೇನೆ” ಎಂದು ಹೇಳಿದರು.

    ಇದಾದ ಬಳಿಕ ಪ್ರಧಾನಿ ಮೋದಿ ವಿರುದ್ಧ ಲೇವಡಿ ಮಾಡಿದ ರಾಹುಲ್, “ದೇಶದ ಯುವಜನತೆ ಮೋದಿ ಬೇಡ ಅಂತ ತಿರಸ್ಕರಿಸಿದ್ದಾರೆ. ನೀವು ಮತ್ತೊಮ್ಮೆ ಪ್ರಧಾನಿಯಾಗುವ ಕನಸನ್ನು ಬಿಟ್ಟುಬಿಡಿ. ಯಾಕಂದ್ರೆ, ಜೂನ್ 04ರಂದು ಇಂಡಿಯಾ ಮೈತ್ರಿಕೂಟ ಸರ್ಕಾರವೇ ಅಧಿಕಾರಕ್ಕೆ ಬರುವುದು. ನಿಮ್ಮ ಸರ್ಕಾರ ಪತನವಾಗಲಿದೆ” ಎಂದರು,(ಏಜೆನ್ಸೀಸ್).

    ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts