More

    ‘ಉರಿ’ ನಿರ್ದೇಶಕನ ಜತೆಗೆ ಸಪ್ತಪದಿ ತುಳಿದ ಯಾಮಿ ಗೌತಮ್​

    ಮುಂಬೈ: ಗಣೇಶ್ ಅಭಿನಯದ ‘ಉಲ್ಲಾಸ ಉತ್ಸಾಹ’ ಚಿತ್ರ ನೆನಪಿರಬೇಕಲ್ಲ? ಈ ಸಿನಿಮಾದಲ್ಲಿ ನಟಿಸಿದ್ದ ಯಾಮಿ ಗೌತಮ್, ನಂತರ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದರು. ಈಗ ಅವರು ತಮ್ಮ ‘ಉರಿ’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಜತೆಗೆ ಸಪ್ತಪದಿ ತುಳಿದಿದ್ದಾರೆ.

    ಇದನ್ನೂ ಓದಿ: ಅವನ ಒಳ್ಳೆಯ ಕೆಲಸಗಳ ಬಗ್ಗೆ ಯಾಕೆ ಬರೆಯುವುದಿಲ್ಲ? … ಟೈಗರ್​ ತಾಯಿಯ ಪ್ರಶ್ನೆ

    ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅವರು ಮದುವೆಯಾಗಿದ್ದು, ಎರಡು ಕುಟುಂಬದ ಕೆಲವರು ಮಾತ್ರ ಭಾಗವಹಿಸಿದ್ದಾರೆ. ಚಿತ್ರರಂಗದ ಪರವಾಗಿ ಯಾವುದೇ ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಹಾಜರಿರಲಿಲ್ಲ. ಮದುವೆಯ ನಂತರ ಯಾಮಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್​ ಮಾಡಿಕೊಂಡಿದ್ದು, ಹಲವರು ಶುಭಾಶಯ ತಿಳಿಸಿದ್ದಾರೆ.

    ಆದಿತ್ಯ ಮತ್ತು ಯಾಮಿ ಅವರದ್ದು ಲವ್ ಕಂ ಅರೇಂಜ್ಡ್​ ಮದುವೆಯಾಗಿದ್ದು, ‘ಉರಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇತ್ತು. ಮದುವೆಯಾಗುವ ಮೂಲಕ ಆದಿತ್ಯ ಮತ್ತು ಯಾಮಿ, ಅದೆಲ್ಲಕ್ಕೂ ತೆರೆ ಎಳೆದಿದ್ದಾರೆ.

    ಇದನ್ನೂ ಓದಿ: ನಾನು ಮಾತಾಡಿದ್ದು ಆ ಗೋವಿಂದ ಬಗ್ಗೆ ಅಲ್ಲ … ಉಲ್ಟಾ ಹೊಡೆದ ಕೆಆರ್​ಕೆ

    ‘ಉಲ್ಲಾಸ ಉತ್ಸಾಹ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಯಾಮಿ, ನಂತರದ ದಿನಗಳಲ್ಲಿ ಆಯುಷ್ಮಾನ್​ ಖುರಾನ ಅಭಿನಯದ ‘ವಿಕ್ಕಿ ಡೋನಾರ್’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಅದಲ್ಲದೆ, ಹೃತಿಕ್​ ರೋಶನ್​ ಅಭಿನಯದ ‘ಕಾಬಿಲ್’, ವಿಕ್ಕಿ ಕೌಶಾಲ್​ ನಟನೆಯ ‘ಉರಿ – ದಿ ಸರ್ಜಿಕಲ್ ಸ್ಟ್ರೈಕ್’ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    Yami G

    ಕಸದ ರಾಶಿ ಬಳಿ ಹಿರಿಯ ನಟಿ ಬಿ. ಜಯಾ ಶವ; ಅಸಲಿಗೆ ಅಲ್ಲಿ ನಡೆದಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts