More

    ಧಾರವಾಡ ಲೋಕಸಭೆ ಚುನಾವಣೆ; ಬಿರು ಬೇಸಿಗೆಯಲ್ಲಿ ಮತದಾನಕ್ಕೆ ಸಜ್ಜು

    ಧಾರವಾಡ: ಜಿಲ್ಲೆಯ ೭ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದೆ. ಕ್ಷೇತ್ರದಾದ್ಯಂತ ೧,೯೦೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನಿಯೋಜಿತ ಅಽಕಾರಿ, ಸಿಬ್ಬಂದಿ ಸೋಮವಾರ ಮತಯಂತ್ರಗಳೊAದಿಗೆ ತೆರಳಿದರು.
    ಕಳೆದ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ. ೭೦.೧೨ರಷ್ಟು ಮತದಾನವಾಗಿತ್ತು. ೨೦೧೪ರಲ್ಲಿ ಶೇ. ೬೫.೯೮ರಷ್ಟು ಮತದಾನವಾಗಿತ್ತು. ಈ ಬಾರಿಯೂ ಬಿರು ಬೇಸಿಗೆಯಲ್ಲಿ ಚುನಾವಣೆ ಬಂದಿದೆ. ಹಿಂದೆAಗಿAತಲೂ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದ್ದು. ೪೦ ಡಿಗ್ರಿ ದಾಟಿದೆ. ಇತ್ತೀಚೆಗೆ ರಾಜ್ಯದ ೧೪ ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಮತದಾನ ಪ್ರಮಾಣ ನೀರಸವಾಗಿದ್ದು ಕಣ್ಮುಂದೆ ಇದೆ. ಬಿಸಿಲಿನ ಹೊಡೆತಕ್ಕೆ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದ್ದರು.
    ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ತಿಂಗಳುಗಟ್ಟಲೇ ಶ್ರಮಿಸಿದೆ. ಮತದಾನ ಜಾಗೃತಿಗಾಗಿ ತರಹೇವಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಿಸಿ ಗಾಳಿ, ಉಷ್ಣಾಂಶ ಹೆಚ್ಚಳದ ಬಗ್ಗೆ ಹವಾಮÁನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಜಿಲ್ಲಾಡಳಿತದಿಂದ ಮತದಾರರ ಆರೋಗ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಗ್ಯೂ ಬಿಸಿಲಿನ ತಾಪ ಹೆಚ್ಚಳವಾಗಿರುವ ದಿನಗಳಲ್ಲಿ ಮತದಾನ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts