More

    ಪೆನ್ ಡ್ರೈವ್ ಪ್ರಕರಣ:ಜೆಡಿಎಸ್ ಮುಖಂಡರಿಂದ ಎಸ್ಪಿಗೆ ಮನವಿ

    ಹಾಸನ: ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಾತಾಣದಲ್ಲಿ ಸುಳ್ಳು ಸುದ್ದಿಯನ್ನು, ಮಾರ್ಫ್ ಪೋಟೋಗಳನ್ನು ಅಪ್ಲೋಡ್ ಮಾಡುವವರ ಬಗ್ಗೆ ಹಾಗೂ ಜಿಲ್ಲೆಯ ಮಹಿಳೆಯರಿಗೆ ಅಪಮಾನ ಆಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮತ್ತು ಶಾಸಕ ಸಿ.ಎನ್. ಬಾಲಕೃಷ್ಣ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಾಧ್ಯಮ ವಕ್ತಾರ ಹೊಂಗೆರೆ ರಘು, ಬ್ಯಾಂಕ್ ನಿರ್ದೇಶಕ ನಾಗರಾಜು ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಮನವಿ ಮಾಡಿದರು.
    ಸೋಮವಾರ ಎಸ್‌ಪಿ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಜೆಡಿಎಸ್ ಮುಖಂಡರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒಂದು ಮನವಿ ಪತ್ರ ಸಲ್ಲಿಸಿದರು. ಈ ಪತ್ರದಲ್ಲಿ ‘ಇತ್ತೀಚೆಗೆ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಕೆಲವರು ಅಂತೆ-ಕಂತೆ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ. ಕೆಲವರ ಬಗ್ಗೆ ಗುಮಾನಿಯಿಂದ ಮಾತನಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ. ನಿಮ್ಮ ಇಂಟಲಿಜೆನ್ಸ್ ಪ್ರಕಾರ ಮಫ್ತಿಯಲ್ಲಿ ಬಂದು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಹರಿಸಬೇಕು. ಇದು ಜಿಲ್ಲೆಯಲ್ಲ, ಸಮಾಜದ ಗೌರವದ ಪ್ರಶ್ನೆಯಾಗಿದೆ,’ ಎಂದು ತಿಳಿಸಿದ್ದಾರೆ.
    ಮುಂದುವರಿದು, ‘ಜಾಲಾತಾಣದಲ್ಲಿ ಸುಳ್ಳು ಸುದ್ದಿಯನ್ನು, ಫೇಕ್ ಪೋಟೋಗಳನ್ನು ಅಪ್ಲೋಡ್ ಮಾಡುವ ಮಾಡಲಾಗುತ್ತಿದೆ. ಯಾವ ಸಮಯದಲ್ಲೂ ಮಹಿಳೆಯರಿಗೆ ಅಪಮಾನ ಆಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಗಮನಹರಿಸಬೇಕು. ಎಲ್ಲೆಂದರಲ್ಲಿ ಇಲ್ಲಸಲ್ಲದ ಅನಗತ್ಯ ವಿಷಯವಾಗಿ ಚರ್ಚೆ ಮಾಡದಂತೆ ಸೂಕ್ತ ನಿರ್ದೇಶನ ಕೊಡಬೇಕು,‘ ಎಂದು ಎಸ್ಪಿ ಅವರಲ್ಲಿ ಮನವಿ ಮಾಡಲಾಗಿದೆ.
    ನಮ್ಮ ಮನವಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇ ವಿಚಾರವಾಗಿ ಸಹಾಯವಾಣಿ ತೆರೆಯಲಾಗಿದೆ. ಏನೇ ದೂರುಗಳು ಇದ್ದರೂ ನೇರವಾಗಿ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ತಿಳಿಸಿದರೆ ಕ್ರಮ ಜರುಗಿಸುವುದಾಗಿ ಎಸ್‌ಪಿ ಅವರು ಹೇಳಿದ್ದಾರೆ ಎಂದು ಜೆಡಿಎಸ್ ಮುಖಂಡರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts