ಸಿನಿಮಾ

ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಖಾತ್ರಿ ಸಹಕಾರಿ

ಯಲಬುರ್ಗಾ: ನರೇಗಾದಡಿ ಕೂಲಿಕಾರರಿಗೆ ಕೆಲಸ ಕೊಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ಕೆ.ಬಸವರಾಜ ಸಲಹೆ ನೀಡಿದರು.

ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 90 ದಿನ ನಿರಂತರ ಕೆಲಸ 

ತಾಲೂಕಿನ ವಜ್ರಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬನಿಗೋಳದಲ್ಲಿ ಉದ್ಯೋಗ ಖಾತ್ರಿಯ ಜಲಸಂಜೀವಿನಿ ಯೋಜನೆಯಡಿ ಕೈಗೊಂಡ ನಾಲಾ ಹೂಳೆತ್ತುವ ಸ್ಥಳದಲ್ಲಿ ಗುರುವಾರ ಜಲಸಂಜೀವಿನಿ ಹಾಗೂ ರೋಜಗಾರ ದಿನಾಚರಣೆಯಲ್ಲಿ ಮಾತನಾಡಿ, ರೈತ ಕುಟುಂಬಗಳಿಗೆ ನರೇಗಾ ಕಾಮಗಾರಿ ವರದಾನವಾಗಿದ್ದು, ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದರು.

ಅಂತರ್ಜಲ ಹೆಚ್ಚಳಕ್ಕೆ ಕೃಷಿಹೊಂಡ, ನಾಲಾ ಸುಧಾರಣೆ, ಬದು ನಿರ್ಮಾಣ ಸೇರಿ ಇನ್ನಿತರ ಕೆಲಸ ಕೈಗೊಂಡು ಭೂಮಿಗೆ ಬೀಳುವ ಮಳೆ ನೀರನ್ನು ಮೊದಲ ಹಂತದಿಂದಲೇ ತಡೆದು ಇಂಗಿಸುವಂಥ ಮಹತ್ತರ ಕೆಲಸ ಮಾಡಲಾಗುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ನರೇಗಾ ಕೆಲಸಕ್ಕೆ ಬರಬೇಕು ಎಂದು ಕರೆ ನೀಡಿದರು. ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಮಾತನಾಡಿದರು. ಗ್ರಾಪಂ ಗಣಕಯಂತ್ರ ನಿರ್ವಾಹಕ ನೀಲಪ್ಪ ಜಗ್ಗಲ್, ಬಿಎಫ್‌ಟಿ ದೇವಪ್ಪ ಬತ್ತಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರಿದ್ದರು.

Latest Posts

ಲೈಫ್‌ಸ್ಟೈಲ್