More

    ಕೃಷಿಯಿಂದ ಕಕ್ಷೆಯವರೆಗೆ ಮಹಿಳೆ ಸಾಧನೆ: ಬಾಲಮಂದಿರದ ಅಧೀಕ್ಷಕಿ ಮಂಜುಳಾ ಶ್ಲಾಘನೆ

    ಮಂಡ್ಯ: ಮಹಿಳೆ ಮಕ್ಕಳನ್ನು ಹೆರುವ ಯಂತ್ರವಲ್ಲ. ಮನೆ ಕೆಲಸ ಸೀಮಿತವಾಗಿಲ್ಲದೆ ಕೃಷಿಯಿಂದ ಕಕ್ಷೆವರೆಗೆ ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಕಡಿಮೆ ಇಲ್ಲದಂತೆ ದುಡಿಯುತ್ತಿದ್ದಾಳೆ ಎಂದು ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಜಿ.ಮಂಜುಳಾ ತಿಳಿಸಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಬಾಲಕಿಯರ ಬಾಲಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ೧೯೭೫ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾ.೮ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆಗೆ ತಂದಿತು. ಇಂದಿನ ದಿನದಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ದುಡಿಯುತ್ತಿದ್ದು, ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾಳೆ. ಅವಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸದ ಜತೆಗೆ ಸಮಾನತೆ ನೀಡಿರುವುದರಿಂದ ಸಮಾಜದಲ್ಲಿ ಮುಂದೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಅವಳಿಗೆ ಆತ್ಮಸ್ಥೈರ್ಯ ನೀಡುವುದರಿಂದ ತನ್ನ ಕುಟುಂಬ ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಹೆಣ್ಣು ಸಮಾಜದ ಕಣ್ಣು, ಬದುಕಿನಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಎಂದು ಬಣ್ಣಿಸಿದರು.
    ಗೃಹ ಪಾಲಕಿ ಪಾರ್ವತಮ್ಮ ಮಾತನಾಡಿ, ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷವಾದರೂ ಮಹಿಳೆಯರಿಗೆ ಲಿಂಗ ಸಮಾನತೆ ಬೇಕಾಗಿದೆ. ತಾಯಿಯಾಗಿ ಸಲಹುವಳು ಹೆಣ್ಣು, ಅಕ್ಕನಾಗಿ ಸರಿ ತಪ್ಪು ತಿದ್ದುವಳು ಹೆಣ್ಣು, ತಂಗಿಯಾಗಿ ಕರುಣೆ ತೋರುವವಳು ಹೆಣ್ಣು, ಹೆಂಡತಿಯಾಗಿ ಮನೆ ಬೆಳಗುವಳು ಹೆಣ್ಣು, ಪ್ರೇಮಮಯಿ ತ್ಯಾಗಮಯಿ ಸ್ತ್ರೀಯರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.
    ದ್ವಿತೀಯ ದರ್ಜೆ ಸಹಾಯಕಿ ಪಿ.ಮಂಜುಳಾ, ಆಪ್ತ ಸಮಾಲೋಚಕಿ ಟಿ.ಎಸ್.ಸುಷ್ಮಾ, ಡೇಟಾ ಎಂಟ್ರಿ ಆಪರೇಟರ್ ಅಶ್ವಿನಿರಾಮ್, ಶಿಕ್ಷಕಿಯರಾದ ಅರುಣಕುಮಾರಿ, ವೇದಾಂಭ, ವಿಜಯ್, ರಕ್ಷಕರಾದ ದೀಪಾ, ನಾಗರತ್ನ, ಪುಟ್ಮಲ್ಲಕ್ಷಮ್ಮ, ಲಕ್ಷ್ಮಿ, ಗೌರಮ್ಮ, ತ್ರಿವೇಣಿ ಇದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗೆ ಆಟೋಟಗಳನ್ನು ಆಡಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts