More

    ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 90 ದಿನ ನಿರಂತರ ಕೆಲಸ 

    ಕುಕನೂರು: ಬೇಸಿಗೆಯಲ್ಲಿ ನರೇಗಾ ಯೋಜನೆಯಡಿ 90 ದಿನ ನಿರಂತರ ಕೆಲಸ ನೀಡಲಾಗುತ್ತಿದೆ ಎಂದು ತಾಪಂ ಇಒ ರಾಮಣ್ಣ ದೊಡ್ಮನಿ ಹೇಳಿದರು.


    ಬೆಣಕಲ್ ಗ್ರಾಮದ ನರೇಗಾ ಯೋಜನೆಯ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ರೋಜ್‌ಗಾರ ದಿನಾಚರಣೆ, ಆರೋಗ್ಯ ಅಮೃತ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಇದನ್ನೂ ಓದಿ: ವೆಂಕಟಗಿರಿ ಆಸ್ಪತ್ರೆಗೆ ಅಂದ ತಂದ ಇಕೋ ಪಾರ್ಕ್: ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ

    ಕೆಲಸಕ್ಕಾಗಿ ಅರ್ಜಿ ಸಂಖ್ಯೆ-6 ಸಲ್ಲಿಸಬೇಕು

    ಕೂಲಿಕಾರರ ಅನುಕೂಲಕ್ಕಾಗಿ ಬೇಸಿಗೆಯಲ್ಲಿ 90 ದಿನ ಕೆಲಸ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು. 100 ದಿನಗಳ ಕೆಲಸಕ್ಕಾಗಿ ಅರ್ಜಿ ಸಂಖ್ಯೆ-6 ಸಲ್ಲಿಸಬೇಕು. ದಿನಕ್ಕೆ 2 ಬಾರಿ ಎನ್‌ಎಂಎಂಎಸ್ ಮಾಡಬೇಕು. ಯೋಜನೆ ಮಾನದಂಡದಂತೆ ಕೆಲಸ ಮಾಡಬೇಕು. ದಿನಕ್ಕೆ 316 ರೂ. ಕೂಲಿ ಪಡೆಯಬಹುದು ಎಂದು ತಿಳಿಸಿದರು.

    ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ

    ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಂಡು ಕಡ್ಡಾಯವಾಗಿ ಮತ ಹಾಕಬೇಕು. ಇತರರನ್ನೂ ಹಕ್ಕು ಚಲಾಯಿಸಲು ಪ್ರೇರೇಪಿಸಬೇಕು ಎಂದರು. ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಬಿಲ್ ಕಲೆಕ್ಟರ್ ಮಲ್ಲೇಶ್ ಜಾಲಿ, ಕಾಯಕ ಮಿತ್ರ ಸವಿತಾ ಮುತ್ತಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts