More

    ಇದು ವಿಶ್ವದ ಅತ್ಯಂತ ದುಬಾರಿ ಸಾಬೂನು: ಬೆಲೆ ಕೇಳಿದ್ರೆ ತಲೆ ತಿರುಗುವುದು ಗ್ಯಾರೆಂಟಿ..!

    ದುಬೈ: ಹದಿನೈದನೇ ಶತಮಾನದಿಂದಲೂ ಸಾಬೂನು ತಯಾರಿಕ ಕಾರ್ಖಾನೆ ಹೊಂದಿರುವ ದುಬೈನ ಸಣ್ಣ ಕುಟುಂಬವೊಂದು ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು ತಯಾರಿಸಿರುವುದಾಗಿ ಹೇಳಿಕೊಂಡಿದೆ.

    ಸಾಬೂನಿನ ಬೆಲೆ 2,800 ಅಮೆರಿಕ ಡಾಲರ್​ ಆಗಿದ್ದು, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 2,06,955 ರೂ. ವೆಚ್ಚವಾಗುತ್ತದೆ. ಹ್ಯಾಂಡ್​ಮೇಡ್​ ಸಾಬೂನಿನ ಬ್ರ್ಯಾಂಡ್​​ ಆಗಿರುವ “ಖಾನ್​ ಐ ಸಾಬೂನ್”​ ಕಂಪನಿಯನ್ನು ಲೆಬನಾನ್​ ಮತ್ತು ತ್ರಿಪೋಲಿ ಮೂಲದ ಬ್ಯಾಡರ್​ ಆ್ಯಂಡ್​ ಸನ್ಸ್ ಸೃಷ್ಟಿಸಿದೆ. ಈ ಕಂಪನಿ ವಿವಿಧ ರೀತಿಯ ದುಬಾರಿ ಸಾಬೂನು ತಯಾರಿಸುತ್ತದೆ. ಇಷ್ಟೇ ಅಲ್ಲದೆ, ಸ್ವಾಭಾವಿಕ ಸುಗಂಧದ್ರವ್ಯ ಮತ್ತು ಅಗತ್ಯ ಎಣ್ಣೆಗಳು ಸೇರಿದಂತೆ ಅನೇಕ ಚರ್ಮ ರಕ್ಷಕ ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ.

    ಇದನ್ನೂ ಓದಿ: ಅಯೋಧ್ಯೆಯ ಏರ್​ಪೋರ್ಟ್​ ಇನ್ಮುಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಿಲ್ದಾಣ

    ಕಂಪನಿಯ ವಿಶೇಷ ಉತ್ಪನ್ನಗಳನ್ನು ದುಬೈ ಮತ್ತು ಯುಎಇನ ಪ್ರಮುಖವಾದ ಸ್ಟೋರ್​ಗಳಲ್ಲಿ ಮಾತ್ರ ನೋಡಬಹುದು ಮತ್ತು ಖರೀದಿಸಬಹುದು. ಆದಾಗ್ಯು ದುಬಾರಿ ಉತ್ಪನ್ನಗಳು ಕೇವಲ ವಿಶೇಷ ವ್ಯಕ್ತಿಗಳು ಮತ್ತು ಗಣ್ಯರಿಗೆ ಮಾತ್ರ ಮಾಡಲ್ಪಟ್ಟಿದೆ. ಇಂತಹ ದುಬಾರಿ ಸಾಬೂನನ್ನು ಮೊದಲ ಬಾರಿಗೆ 2013ರಲ್ಲಿ ಮಾಡಲಾಯಿತು. ಬಳಿಕ ಅದನ್ನು ಕತಾರ್​ನ ಪ್ರಥಮ ಮಹಿಳೆಗೆ ಉಡುಗೊರೆಯಾಗಿ ನೀಡಲಾಗಿತ್ತು.

    ದುಬಾರಿ ಸಾಬೂನನ್ನು ಚಿನ್ನ ಮತ್ತು ವಜ್ರದ ಪುಡಿಯಿಂದ ಮಾಡಲಾಗುತ್ತದೆ. ನೋಡಲು ಚೀಸ್​ ರೂಪದಲ್ಲಿ ಕಂಡರೂ ದುಬಾರಿ ಚೀಸ್​ ತುಣುಕನ್ನು ಸಾಬೂನಿನಲ್ಲಿ ಬಳಸಲಾಗಿರುತ್ತದೆ. 17 ಗ್ರಾಂ 24 ಕ್ಯಾರೆಟ್​ ಗೋಲ್ಡ್​, ಕೆಲವೇ ಗ್ರಾಂ ಡೈಮಂಡ್​ ಪೌಡರ್​, ಸಾವಯವ ಜೇನು, ಶುದ್ಧವಾದ ಆಲಿವ್​ ಎಣ್ಣೆ, ಖರ್ಜುರ ಸೇರಿದಂತೆ ಮುಂತಾದ ವಿಶೇಷ ಪದಾರ್ಥಗಳಿಂದ ಸಾಬೂನು ತಯಾರಿಸಲಾಗಿದೆ.

    ಸಾಬೂನಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಕಂಪನಿಯ ಸಿಇಒ ಸಾಬೂನನ್ನು ಬಹ್ರೇನಿ ನಟಿ ಮತ್ತು ಸೂಪರ್​ಸ್ಟಾರ್​ ಶೈಲಾ ಸಾಬ್ತ್​ರಿಗೆ ನೀಡುತ್ತಿರುವುದನ್ನು ನೋಡಬಹುದಾಗಿದೆ. (ಏಜೆನ್ಸೀಸ್​)

     

    View this post on Instagram

     

    A post shared by Beirutcom.net (@beirutcomwebsite)

    PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts