More

    ಒಬ್ಬನೇ ವ್ಯಕ್ತಿಯಿಂದ, ಒಂದೇ ಸಮಯದಲ್ಲಿ ನಾವಿಬ್ಬರೂ ಗರ್ಭಿಣಿಯರಾಗಬೇಕು…: ಅವಳಿ ಸೋದರಿಯರ ಮಹದಾಸೆ

    ಅವಳಿಗಳು ನೋಡಲು ಒಂದೇ ರೂಪ ಹೊಂದಿರುತ್ತಾರೆ. ಹಾಗೇ ಒಂದೇ ತರಹದ ಡ್ರೆಸ್​, ಹೇರ್​ಸ್ಟೈಲ್​ಗಳನ್ನು ಮಾಡಿಕೊಳ್ಳುವುದು ತೀರ ಸಾಮಾನ್ಯ.

    ಆದರೆ ಜಗತ್ತಿನಲ್ಲಿರುವ ಅವಳಿಗಳಲ್ಲೇ ಅತ್ಯಂತ ಹೆಚ್ಚಾಗಿ ಸಾಮ್ಯತೆ ಹೊಂದಿರುವ ಅವಳಿಗಳು ಎಂದು ಪ್ರಸಿದ್ಧವಾದ ಆಸ್ಟ್ರೇಲಿಯಾದ ಅನ್ನಾ ಮತ್ತು ಲ್ಯೂಸಿ ಡಿಸಿಂಕ್​ ಅವರು ಮತ್ತಷ್ಟು ವಿಭಿನ್ನ. ಇದನ್ನೂ ಓದಿ: ನಾಲ್ಕು ವರ್ಷದ ಬಾಲಕವಿ; ಕವನ ಸಂಕಲನಕ್ಕೆ ಒಪ್ಪಂದ ಮಾಡಿಕೊಂಡ ಇಂಗ್ಲೆಂಡ್​ನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ

    ಇವರಿಬ್ಬರೂ ಒಂದೇ ವ್ಯಕ್ತಿಯೊಂದಿಗೆ 2012ರಿಂದಲೂ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಅವರನ್ನೇ ಮದುವೆಯಾಗುವ ಆಸೆ ಹೊಂದಿದ್ದಾರಂತೆ. ಅಷ್ಟೇ ಅಲ್ಲ, ಆತನಿಂದ, ಒಂದೇ ಸಮಯದಲ್ಲಿ ಮಗುಪಡೆಯಬೇಕು ಎಂಬುದೂ ಇವರ ಮಹದಾಸೆ. ಆದರೆ ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಇನ್ನೂ ಸುಮ್ಮನಿದ್ದಾರಂತೆ…!
    ಇವರಿಬ್ಬರೂ ಅವಳಿ ಸಹೋದರಿಯರು ಮದುವೆಯಾಗಲು ಬಯಸುತ್ತಿರುವುದು ಬೆನ್​ ಬೈರ್ನ್​ ಎಂಬಾತನನ್ನು.
    ಆಸ್ಟ್ರೇಲಿಯಾದ ಟಿವಿ ಶೋ ಒಂದರಲ್ಲಿ ಸಹೋದರಿಯರು ತಮ್ಮ ಆಸೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇಲ್ಲಿನ ಕಾನೂನಿನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದ ಕಾರಣ ಸುಮ್ಮನಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ.

    ನಾವಿಬ್ಬರೂ ಒಂದೇ ಸಮಯದಲ್ಲಿ ಗರ್ಭ ಧರಿಸಬೇಕು ಎಂದು ಇವರು 2018ರಲ್ಲೂ ಒಮ್ಮೆ ಹೇಳಿಕೊಂಡಿದ್ದರು. ಸಹಜವಾಗಿ ಲೈಂಗಿಕ ಕ್ರಿಯೆಯ ಮೂಲಕ ಒಟ್ಟಿಗೆ ಗರ್ಭ ಧರಿಸುವುದು ಕಷ್ಟವಾಗಬಹುದು. ಮದುವೆಯಾಗಲು ಅವಕಾಶ ಇಲ್ಲದಾಗ ಇದೂ ಅಸಾಧ್ಯ. ಹಾಗಾಗಿ ನಾವು ನಮ್ಮ ಗೆಳೆಯ ಬೆನ್​ ಬೈರ್ನ್​ರಿಂದ ಐವಿಎಫ್​ ಮೂಲಕ ಬಸಿರಾಗಲು ಬಯಸುತ್ತೇವೆ ಎಂದು ಶೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ

    ನಾವು ಒಟ್ಟಾಗಿ ಸ್ನಾನ ಮಾಡುತ್ತೇವೆ. ಮೇಕಪ್​, ತಿನ್ನುವುದು, ಮಲಗುವುದು ಎಲ್ಲವೂ ಜತೆಯಾಗಿಯೇ ಮಾಡುತ್ತೇವೆ. ನಾವು ಇಬ್ಬರಾದರೂ…ಒಬ್ಬರಂತೆಯೇ ಬದುಕಲು ಇಷ್ಟಪಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
    ಇಬ್ಬರೂ ಒಟ್ಟಾಗಿಯೇ ಗರ್ಭ ಧರಿಸಬೇಕು. ಒಂದೇ ಸಮಯದಲ್ಲಿ ನಮ್ಮಿಬ್ಬರಿಗೆ ಮಕ್ಕಳು ಹುಟ್ಟಬೇಕು. ನಾವಿಬ್ಬರೂ ಜತೆಗೇ ಮುದುಕಿಯರಾಗಬೇಕು…ಒಟ್ಟಿಗೇ ಸಾಯಬೇಕು ಎಂದಿದ್ದಾರೆ.

    ಇವರಿಬ್ಬರೂ ಮೊದಲು ತುಂಬ ಒಂದೇ ತರ ಇರಲಿಲ್ಲ. ಸುಮಾರು 2,50,000 ಯುಎಸ್​ ಡಾಲರ್​ ವೆಚ್ಚ ಮಾಡಿ ಪ್ಲಾಸ್ಟಿಕ್​ ಸರ್ಜರಿ ಮೂಲಕ ಹೆಚ್ಚಿನ ಸಾಮ್ಯತೆ ತಂದುಕೊಂಡಿದ್ದಾರೆ.  ತುಟಿ, ಸ್ತನ, ಮುಖದ ಟ್ಯಾಟೂ, ಚರ್ಮಕ್ಕೆ ಸಂಬಂಧಪಟ್ಟಂತೆ ಒಟ್ಟು 14 ಸಲ ಸರ್ಜರಿ ಮಾಡಿಸಿಕೊಂಡಿದ್ದಾರೆ.(ಏಜೆನ್ಸೀಸ್)

    ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts